ಭಾರತೀಯ ನ್ಯಾಯ ಸಂಹಿತಾ ಮಸೂದೆ: ‘ವಿರೋಧಿಗಳನ್ನು ಮೌನಗೊಳಿಸಲು ತಂತ್ರ ರೂಪಿಸಲಾಗುತ್ತಿದೆ’ ಎಂದ ಕಪಿಲ್ ಸಿಬಲ್
ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆಯನ್ನು (ಐಪಿಸಿ) ಬದಲಾಯಿಸಲು ಪ್ರಯತ್ನಿಸುವ ಭಾರತೀಯ ನ್ಯಾಯ ಸಂಹಿತಾ ಮಸೂದೆ – 2023 ರಾಜಕೀಯ ಉದ್ದೇಶಗಳಿಗಾಗಿ ಕಠಿಣವಾಗಿ ಪೊಲೀಸ್ ಅಧಿಕಾರಗಳನ್ನು ಬಳಸಲು ಅನುಮತಿಸುತ್ತದೆ ಎಂದು ರಾಜ್ಯಸಭಾ ಸಂಸದ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಆರೋಪಿಸಿದ್ದಾರೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ‘ಇಂತಹ ಕಾನೂನುಗಳನ್ನು ತರುವ ಹಿಂದಿನ ಸರ್ಕಾರದ ಕಾರ್ಯಸೂಚಿ ‘ವಿರೋಧಿಗಳನ್ನು ಮೌನಗೊಳಿಸುವುದು’ ಎಂದು ಹೇಳಿದ್ದಾರೆ. ‘ಭಾರತೀಯ ನ್ಯಾಯ ಸಂಹಿತಾ (2023) (ಬಿಎನ್ಎಸ್) ರಾಜಕೀಯ ಉದ್ದೇಶಗಳಿಗಾಗಿ ಕಠಿಣ ಪೊಲೀಸ್ ಅಧಿಕಾರಗಳನ್ನು ಬಳಸಲು ಅನುಮತಿಸುತ್ತದೆ. ಬಿಎನ್ಎಸ್ ನ 15 ರಿಂದ 60 ಅಥವಾ 90 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಅನುಮತಿಸುತ್ತದೆ. ಜೊತೆಗೆ ವಿರೋಧಿಗಳನ್ನು ಮೌನಗೊಳಿಸುವುದೇ ಉದ್ದೇಶ’ ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿದೆಯೋ ಅಲ್ಲೆಲ್ಲಾ ರಾಜಕೀಯ ವಿರೋಧಿಗಳ ಮೇಲೆ ದಾಳಿ ನಡೆಯುತ್ತದೆ. ಅಲ್ಲದೇ ಪೊಲೀಸ್ ಪಡೆಯು ಅಧಿಕಾರದಲ್ಲಿರುವ ರಾಜಕೀಯ ವ್ಯಕ್ತಿಗಳ ನಿರ್ದೇಶನದಂತೆ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನೀವು ಪೊಲೀಸ್ ಅಥವಾ ಜಾರಿ ಸಂಸ್ಥೆಗಳನ್ನು 60-90 ದಿನಗಳವರೆಗೆ ಕಸ್ಟಡಿಗೆ ನೀಡಿದರೆ, ಅದು ವಿಪತ್ತಿಗೆ ಕಾರಣ ಆಗಲಿದೆ ಎಂದು ಸಿಬಲ್ ಆರೋಪಿಸಿದ್ದಾರೆ. ದೇಶದ್ರೋಹ ಕಾನೂನು ಬದಲಾದ ರೀತಿ ಮತ್ತು ಜಾರಿಗೆ ಬಂದ ರೀತಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಿಬಂಧನೆಗಳು, ರಾಷ್ಟ್ರೀಯ ಭದ್ರತೆಗಾಗಿ ಯಾವ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಬಹುದು ಎಂಬುದನ್ನು ವ್ಯಾಖ್ಯಾನಿಸಿಲ್ಲ ಎಂದು ಅವರು ಹೇಳಿದರು.
ಒಂದೆಡೆ ಅವರು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ ಜನರನ್ನು ಮೌನಗೊಳಿಸುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ ಎಂದು ಸಿಬಲ್ ಹೇಳಿದರು. ಇದಕ್ಕೂ ಮುನ್ನ ಶುಕ್ರವಾರ, ಅಮಿತ್ ಶಾ ಅವರು ಭಾರತೀಯ ನ್ಯಾಯ ಸಂಹಿತಾ ಮಸೂದೆ – 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ – 2023 ಮತ್ತು ಭಾರತೀಯ ಸಾಕ್ಷಯ ಮಸೂದೆ – 2023 ಅನ್ನು ಮಂಡಿಸಿದರು. ಈ ಮಸೂದೆಗಳು ಭಾರತೀಯ ದಂಡ ಸಂಹಿತೆ, 1860, ಕ್ರಿಮಿನಲ್ ಪ್ರೊಸೀಜರ್ ಕೋಡ್, (1898), 1973 ಮತ್ತು ಬ್ರಿಟಿಷರು ಮಾಡಿದ ಭಾರತೀಯ ಸಾಕ್ಷ್ಯ ಕಾಯ್ದೆ 1872 ಅನ್ನು ರದ್ದುಗೊಳಿಸುತ್ತವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw