ಗಡಿ ಮೀರಿದ ಪ್ರೇಮ: ಪ್ರಿಯಕರನನ್ನು ಹುಡುಕಿಕೊಂಡು ಭಾರತಕ್ಕೆ ಬಂದ ಬಾಂಗ್ಲಾದೇಶದ ಸುಂದರಿ..!
ದೇಶದಲ್ಲಿ ಮತ್ತೊಂದು ಗಡಿ ಮೀರಿದ ಪ್ರೇಮ ಪ್ರಕರಣವೊಂದು ಬಯಲಾಗಿದೆ. ಬಾಂಗ್ಲಾದೇಶದ ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಭೇಟಿ ಮಾಡಲು ರಾಜಸ್ಥಾನದ ಅನುಪ್‌ಗಢಕ್ಕೆ ಬಂದಿದ್ದಾಳೆ.
ಆರು ತಿಂಗಳ ಹಿಂದೆ ಇವರಿಬ್ಬರು ಸೋಷಿಯಲ್ ಮೀಡಿಯಾ ಆಪ್ ಮೂಲಕ ಸ್ನೇಹಿತರಾಗಿದ್ದರು. ಯುವತಿ ತನ್ನ ಪ್ರಿಯಕರನನ್ನು ಭೇಟಿ ಮಾಡಲು ಸುಮಾರು 2200 ಕಿಲೋಮೀಟರ್ ಪ್ರಯಾಣಿಸಿ ಪ್ರವಾಸಿ ವೀಸಾದೊಂದಿಗೆ ಭಾರತಕ್ಕೆ ಬಂದಿದ್ದಾಳೆ ಎಂದು ರಾವ್ಲಾ (ಅನುಪ್‌ಗಢ) ಪೊಲೀಸ್ ಠಾಣಾಧಿಕಾರಿ ರಮೇಶ್ ಕುಮಾರ್ ಹೇಳಿದರು.
ಉಮ್ಮಿ ಹಬೀಬಾ ಅಲಿಯಾಸ್ ಹನಿ (30 ವರ್ಷ) ಪ್ರವಾಸಿ ವೀಸಾ ಪಡೆದಿದ್ದಾರೆ. ಆಕೆಯ ಬಳಿ 2000 ಬಾಂಗ್ಲಾದೇಶದ ಕರೆನ್ಸಿ (ಟಾಕಾ) ಕೂಡ ಪತ್ತೆಯಾಗಿದೆ. ಅನುಪಗಢದ ರಾವ್ಲಾ ಮಂಡಿ ಗ್ರಾಮದ ನಿವಾಸಿ ರೋಷನ್ ಸಿಂಗ್ ಅವರನ್ನು ಭೇಟಿ ಮಾಡಲು ಈಕೆ ಬಂದಿದ್ದಾರೆ. ಪ್ರೇಮಿಗಳಿಬ್ಬರನ್ನೂ ಪೊಲೀಸ್ ಠಾಣೆಯಲ್ಲಿ ಇರಿಸಿ ವಿಚಾರಣೆ ನಡೆಸಲಾಗಿದೆ.
ಸ್ಥಳೀಯ ಪಂಚಾಯತ್ ಸಮಿತಿ ಸದಸ್ಯೆಯ ಪತಿ ಗೋಪಿ ಭುಕರ್ ಮಾತನಾಡಿ, ಬಾಂಗ್ಲಾದೇಶದ ಉಮ್ಮಿ ಹಬೀಬಾ ಅವರು ನಮ್ಮ ಗ್ರಾಮದ ರೋಷನ್‌ಗೆ 6 ತಿಂಗಳ ಮೊದಲು ‘ಯಾಲಾ ವಾಯ್ಸ್ ಚಾಟ್’ ಮೂಲಕ ಸ್ನೇಹ ಬೆಳೆಸಿದ್ದರು. ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರ ನಡುವೆ ವಿಡಿಯೋ ಕಾಲ್‌ನಲ್ಲಿಯೂ ಮಾತುಕತೆ ನಡೆದಿದೆ. ಉಮ್ಮಿ ಹಬೀಬಾ ತನ್ನ ಪ್ರೀತಿಯನ್ನು ಹುಡುಕಲು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದಾಳೆ ಎಂದಿದ್ದಾರೆ.
ಹಬೀಬಾ ಸೆಪ್ಟೆಂಬರ್ 3ರಂದು ಬೆಳಿಗ್ಗೆ ಬಿಕಾನೇರ್ ರೈಲು ನಿಲ್ದಾಣವನ್ನು ತಲುಪಿದರು. ರೋಶನ್ ಅವಳನ್ನು ಕರೆದುಕೊಂಡು ಹೋಗಲು ಬಿಕಾನೇರ್ ತಲುಪಿದ. ಹಬೀಬಾ ಎರಡು ದಿನ ರೋಷನ್ ಮನೆಯಲ್ಲಿಯೇ ಇದ್ದಳು. ಮಂಗಳವಾರ ಮಧ್ಯಾಹ್ನ ಯಾರೋ ಈ ಬಗ್ಗೆ ರಾವ್ಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಉಮ್ಮಿ ಹಬೀಬಾ ಮತ್ತು ರೋಷನ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ವಿಪರ್ಯಾಸವೆಂದರೆ ಈ ರೋಶನ್ ಗೆ ಎರಡು ವರ್ಷಗಳ ಹಿಂದೆ ರೋಜ್ಡಿ ಪ್ರದೇಶದ ನಿವಾಸಿ ಸೋಮಾ ಬಾಯಿ ಜತೆ ಮದುವೆ ಆಗಿತ್ತು. ರೋಷನ್‌ಗೆ 7 ತಿಂಗಳ ಮಗನೂ ಇದ್ದಾನೆ.