ಸೆಗಣಿ ತಿಂದು, ನೀವೂ ತಿನ್ನಿ ಎಂದು ಕರೆ ನೀಡಿದ ಹುಚ್ಚ ವೈದ್ಯ! - Mahanayaka

ಸೆಗಣಿ ತಿಂದು, ನೀವೂ ತಿನ್ನಿ ಎಂದು ಕರೆ ನೀಡಿದ ಹುಚ್ಚ ವೈದ್ಯ!

doctor
19/11/2021

ಹರ್ಯಾಣ: ಮಾಂಸಾಹಾರ ಆದಿ ಮಾನವನ ಕಾಲದಿಂದಲೂ ಮನುಷ್ಯ ತಿನ್ನುತ್ತಿದ್ದ ಆಹಾರವಾಗಿದೆ. ಆದರೆ ಈ ಮಾಂಸಾಹಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಆದರೆ, ಇಲ್ಲೊಬ್ಬ ವೈದ್ಯ ದನದ ಸೆಗಣಿ(ಮಲ) ತಿನ್ನುವಂತೆ ಜನರಿಗೆ ಬಿಟ್ಟಿ ಸಲಹೆ ನೀಡಿದ್ದಾನೆ.

ಹರ್ಯಾಣ ಮೂಲದ ವೈದ್ಯ ಮನೋಜ್ ಮಿತ್ತಲ್ ಈ ಸಲಹೆ ನೀಡಿದ್ದು, ಗರ್ಭಿಣಿ ಮಹಿಳೆಯರು ಸೆಗಣಿ ತಿನ್ನಿ, ಇದರಿಂದ ಸಹಜ ಹೆರಿಗೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಗರ್ಭಿಣಿ ಸ್ತ್ರೀಯರು ಪೌಷ್ಠಿಕಾಂಶಯುಕ್ತ ಆಹಾರ ತಿನ್ನುವಂತೆ ಹೇಳುವ ವೈದ್ಯರನ್ನು ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ವೈದ್ಯನೊಬ್ಬ ಸೆಗಣಿ ತಿನ್ನಿ ಎನ್ನುವ ಮೂಲಕ ದೇಶಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾನೆ.

ಈತ ಹೇಳಿರುವ ಮಾತು ಕೇಳಿದರೆ, ನಿಜವಾಗಿಯೂ ಈತ ವೈದ್ಯನೋ ಅಥವಾ ಮಾನಸಿಕ ರೋಗಿಯೋ ಎನ್ನುವ ಅನುಮಾನ ಬರುವಂತಿದೆ. “ದನದ ಸೆಗಣಿಯು ಮನುಷ್ಯನ ದೇಹ ಮತ್ತು ಆತ್ಮವನ್ನು ಶುದ್ಧ ಮಾಡುತ್ತದೆ. ಮಹಿಳೆಯರು ಸೆಗಣಿ ಸೇವಿಸುವುದು ಉತ್ತಮ ಎಂದು ತಾನೇ ಖುದ್ದಾಗಿ ಸೆಗಣಿ ತಿಂದು ತೋರಿಸಿದ್ದಾನೆ. ಜೊತೆಗೆ ದನದ ಮೂತ್ರಗಳನ್ನು ಕುಡಿಯಿರಿ ಎಂದು ಬಿಟ್ಟಿ ಸಲಹೆಯನ್ನೂ ನೀಡಿದ್ದಾನೆ.

ಯಾವುದೇ ಪ್ರಾಣಿಯ ಮಲ, ಮೂತ್ರದಲ್ಲಿ ಸಾಕಷ್ಟು ಸಂಖ್ಯೆಯ ರೋಗಾಣುಗಳು ಇರುತ್ತವೆಯೇ ಹೊರತು, ರೋಗ ನಿರೋಧಕ ಶಕ್ತಿ ಇರುವುದಿಲ್ಲ ಎನ್ನುವುದನ್ನು ವೈದ್ಯ ಲೋಕ ಈಗಾಗಲೇ ಸಾರಿ ಹೇಳಿದೆ. ದನದ ಮಲ, ಮೂತ್ರಕ್ಕೂ ಇತರ ಪ್ರಾಣಿಗಳ ಮಲ ಮೂತ್ರಕ್ಕೂ ಯಾವುದೇ ಭಿನ್ನತೆ ಇಲ್ಲ ಎಂದು ಕೂಡ ಹೇಳಿದೆ. ಆದರೂ, ಸೆಗಣಿ ತಿನ್ನಿ, ಮೂತ್ರ ಕುಡಿಯಿರಿ ಎನ್ನುವ ಹೇಳಿಕೆಗಳು ನಿರಂತರವಾಗಿ ಬರುತ್ತಲೇ ಇವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಗ್ ನ್ಯೂಸ್: ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಮೋದಿ ಸರ್ಕಾರ!

ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ | 6 ಜಿಲ್ಲೆಗಳಲ್ಲಿ ರೆಡ್ ಅಲಾರ್ಟ್ ಘೋಷಣೆ: ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು: ನದಿಯಂತಾದ ರಸ್ತೆ, ವ್ಯಾಪಾರ ಕಳೆದುಕೊಂಡ ವ್ಯಾಪಾರಿಗಳು | ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ

ಹಂಸಲೇಖ ವಿರುದ್ಧ ದೂರು ನೀಡಿದ ವ್ಯಕ್ತಿಯ ವಿರುದ್ಧವೂ ದೂರು ದಾಖಲು

ಹೌದು ನಾನು ಕಿರುಚುವ ಬೊಬ್ಬೆ ಹೊಡೆಯುವ ‘ಕಲ್ಕಿಂಗ್ ಸ್ಟಾರ್’ | ಟೀಕಾಕಾರರಿಗೆ ದೀಪು ಶೆಟ್ಟಿಗಾರ್ ತಿರುಗೇಟು

ಮನೆ ಕೆಲಸದವರನ್ನು ಕೊಂದು 95 ಲಕ್ಷ ರೂ. ದೋಚಿದ ಐವರು ದರೋಡೆಕೋರರು ಅರೆಸ್ಟ್

ಇತ್ತೀಚಿನ ಸುದ್ದಿ