ಲಾಕ್ ಡೌನ್ ವೇಳೆ ಸೀಝ್ ಆಗಿದ್ದ ವಾಹನಗಳನ್ನು ಬಿಡಿಸಿಕೊಳ್ಳುವುದು ಹೇಗೆ? | ಏನದು 3 ಕಂಡೀಶನ್ಸ್?
ಬೆಂಗಳೂರು: ಲಾಕ್ ಡೌನ್ ಸಂದರ್ಭದಲ್ಲಿ ಲಾಕ್ ಡೌನ್ ಉಲ್ಲಂಘನೆ ಸಂಬಂಧ ಸೀಝ್ ಮಾಡಿರುವ ವಾಹನಗಳನ್ನು ಮಾಲಿಕರು ವಾಪಸ್ ಪಡೆದುಕೊಳ್ಳಬಹುದಾಗಿದ್ದು, ವಾಹನ ಮಾಲಿಕರು ದಂಡ ತೆತ್ತು ತಮ್ಮ ವಾಹನಗಳನ್ನು ವಾಪಸ್ ಪಡೆಯಬಹುದು ಎಂದು ವರದಿಯಾಗಿದೆ.
ಯಾರದ್ದೆಲ್ಲ ವಾಹನ ಸೀಝ್ ಆಗಿದೆಯೋ ಅವರು, ತಮ್ಮ ಹಳೆಯ ಕೇಸ್ ಗಳನ್ನು ಕ್ಲೀಯರ್ ಮಾಡಬೇಕಾಗುತ್ತದೆ. ಜೊತೆಗೆ ಲಾಕ್ ಡೌನ್ ನಿಯಮ ಉಲ್ಲಂಘನೆಗೆ 500 ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಹೀಗೆ ಮಾಡಿದರೆ, ನಿಮ್ಮ ವಾಹನ ವಾಪಸ್ ಪಡೆಯಬಹುದಾಗಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಇನ್ನೂ 100 ರೂಪಾಯಿಯ ಬಾಂಡ್ ಪೇಪರ್, ಆಧಾರ್ ಕಾರ್ಡ್, ಡಿಎಲ್ ಮತ್ತು ಆರ್ ಸಿ ದಾಖಲೆಯ ಜೆರಾಕ್ಸ್ ಹಾಗೂ ಒಂದು ಫೋಟೋವನ್ನು ಈ ಸಂದರ್ಭದಲ್ಲಿ ಠಾಣೆಗೆ ಸಲ್ಲಿಸಬೇಕಾಗುತ್ತದೆ. ಹಲವೆಡೆ ಪ್ರೈವೇಟ್ ಪಾರ್ಕಿಂಗ್ ಚಾರ್ಜ್ ಕೂಡ ಅಪ್ಲೈ ಆಗಿದ್ದು ಅದನ್ನೂ ಮಾಲಿಕರು ಕಟ್ಟಬೇಕಾಗುತ್ತದೆ ಎಂದು ತಿಳಿದು ಬಂದಿದೆ.
ದಂಡ ಕಟ್ಟಿ ಎನ್ ಒಸಿ ತಂದ ಬಳಿಕ ನಿಮ್ಮ ವಾಹನಗಳನ್ನು ವಾಪಸ್ ನೀಡಲಾಗುತ್ತದೆ. ನಿನ್ನೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ವಾಹನಗಳನ್ನು ಬಿಡಿಸಿಕೊಳ್ಳಲು ವಾಹನ ಮಾಲಿಕರು ಬರುತ್ತಿದ್ದಾರೆ. ನಗರದ ಎಲ್ಲ ಠಾಣಾ ವ್ಯಾಪ್ತಿಗಳಲ್ಲಿ ಕೂಡ ವಾಹನ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.