8 ಚಿರತೆಗಳ ಚರ್ಮ ಸೇರಿದಂತೆ ಹಲವು ವನ್ಯಜೀವಿಗಳ ಅಂಗಾಂಗ ಪತ್ತೆ | ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ದಾಳಿ
30/01/2021
ಅನಂತ್ ನಾಗ್: ವನ್ಯ ಜೀವಿಗಳ ಚರ್ಮ ಸೇರಿದಂತೆ ವಿವಿಧ ಅಂಗಾಂಗಳನ್ನು ವ್ಯಕ್ತಿಯೋರ್ವನಿಂದ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅನಂತ್ ನಾಗ್ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಜಂಟಿ ತಂಡವು ಅನಂತ್ ನಾಗ್ ನಲ್ಲಿ ದಾಳಿ ನಡೆಸಿ 8 ಚಿರತೆ ಚರ್ಮ, 38 ಕರಡಿಯ ಪಿತ್ತಕೋಶಗಳು ಹಾಗೂ 4 ಕಸ್ತೂರಿ ಪ್ರಿಯ ಬೀಜಕೋಶಗಳನ್ನು ವಶಪಡಿಸಿಕೊಂಡಿದ್ದಾರೆ.
ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ, ಅನಂತ್‌ನಾಗ್ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಜಂಟಿ ತಂಡವು ಈ ದಾಳಿ ನಡೆಸಿದ್ದು, ಓರ್ವ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸದ್ಯ ಬಂಧಿತನಾಗಿರುವ ಆರೋಪಿ ನೀಡುವ ಮಾಹಿತಿ ಆಧರಿಸಿ ಇನ್ನಷ್ಟು ಆರೋಪಿಗಳ ಬಂಧನದ ಸಾಧ್ಯತೆ ಇದೆ ಎಂದು ಹೇಳಲಾಗಿದೆ.