ಸ್ವ–ಉದ್ಯೋಗಿಗಳಿಗೆ “ಸ್ವಉದ್ಯೋಗ ರತ್ನ” ಪ್ರಶಸ್ತಿ
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ (RSETI ) ಸೊಣ್ಣಹಳ್ಳಿಪುರ ಸಂಸ್ಥೆಯು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 35 ಕ್ಕೂ ಹೆಚ್ಚು ಶಿಬಿರಾರ್ಥಿಗಳನ್ನೊಳಗೊಂಡಿದ್ದ 30 ದಿನಗಳ ವಸ್ತ್ರ ಕಲಾ ಉದ್ಯಮ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾದ ಲಕ್ಕೊಂಡನಹಳ್ಳಿ ಗ್ರಾಮಪಂಚಾಯತಿ ಸದಸ್ಯರು ಹಾಗೂ ರಾಜ್ಯ ಪ್ರಶಸ್ತಿ ವಿಜೇತರಾದ ಭಾರತಿ ದೇವರಾಜ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆಯ ನಿವಾರಣೆಗೆ RSETI ಸಂಸ್ಥೆಗಳು ಬೆನ್ನೆಲುಬಾಗಿವೆ. ಮಹಿಳೆಯರು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿವೆ ಎಂದರು.
ಸಂಸ್ಥೆಯ ನಿರ್ದೇಶಕರಾದ ಎಂ.ಗಿರಿಯಪ್ಪ ಮಾತನಾಡಿ, ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತವಾಗಿರದೆ, ಎಲ್ಲಾ ರಂಗದಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಸ್ವತಂತ್ರ ಜೀವನ ನಡೆಸಬೇಕಾದರೆ ಮೊದಲು ಸ್ವಾವಲಂಬಿಗಳಾಗಬೇಕು, ಅದಕ್ಕಾಗಿ ಸ್ವ ಉದ್ಯೋಗವನ್ನು ಕೈಗೊಂಡರೆ ಮಾತ್ರ ಸ್ವತಂತ್ರದ ಜೀವನ ನಡೆಸಲು ಸಾಧ್ಯ ಎಂದರು. ಈ ನಿಟ್ಟಿನಲ್ಲಿ ಮಹಿಳೆ ಇಂದು ಎಲ್ಲಾ ರಂಗದಲ್ಲೂ ಸಾಧಕಿಯಾಗಿದ್ದಾಳೆ ಎಂದರೆ ತಪ್ಪಾಗಲಾರದು. ಮಹಿಳೆಗೆ ಸಮಾನತೆ ದೊರೆತದ್ದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಹೊರತು ಯಾವುದೇ ಗುಡಿ ಗುಂಡಾರಗಳಿಂದ ಅಲ್ಲಾ ಎಂದು ಮನವರಿಕೆ ಮಾಡಿಕೊಟ್ಟರು.
ಮಹಿಳೆಯರು ಯಾವಾಗ ಮೂಢನಂಬಿಕೆಯಿಂದ ಹೊರಬಂದು, ವೈಜ್ಞಾನಿಕವಾಗಿ ಆಲೋಚಿಸಿ ಬದುಕನ್ನು ಕಟ್ಟಿಕೊಳ್ಳಬಲ್ಲಳೋ ಅಂದು ಈ ದೇಶದ ಭವಿಷ್ಯ ಬದಲಾಗಲು ಸಾಧ್ಯ ಎಂದೂ ತಿಳಿಸಿದರು. 2022– 23 ನೇ ಆರ್ಥಿಕ ಸಾಲಿನಲ್ಲಿ ತರಬೇತಿ ಪಡೆದು ಸ್ವ ಉದ್ಯೋಗವನ್ನು ಕೈಗೊಂಡಿದ್ದ ಮೂರೂ ಮಹಿಳೆಯರಿಗೆ ಸಂಸ್ಥೆಯ ವತಿಯಿಂದ ಸ್ವಉದ್ಯೋಗ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭಲ್ಲಿ ಅಕ್ಕಮಹಾದೇವಿ ಸ್ತ್ರೀ ಶಕ್ತಿ ಸ್ವ ಸಹಾಯಕ ಸಂಘದ 25 ಕ್ಕೂ ಹೆಚ್ಚು ಸದಸ್ಯರು ಹಾಗೂ ಸಂಸ್ಥೆಯ ಸಿಬ್ಬಂದಿಗಳಾದ ಚಂದ್ರಕಾಂತ್ ಹಿರೇಮಠ್, ಮುನಿಕೃಷ್ಣ ಎಂ, ಸುಗುಣ ಬಿ, ನಾಗೇಶ್ ಕೆ ಹಾಗು ಮುನಿಪಟಲಪ್ಪ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw