ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಬಾಲಕ - Mahanayaka
5:09 PM Thursday 12 - December 2024

ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಬಾಲಕ

selfie
24/01/2022

ದಾವಣಗೆರೆ: ರೈಲ್ವೆ ಹಳಿಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಹೋಗಿರುವ 16 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಸಚಿನ್‌ ಮೃತ ಬಾಲಕ. ಸಚಿನ್​ ಸ್ನೇಹಿತರ ಜತೆಗೆ ಫೋಟೋ ತೆಗೆಸಿಕೊಳ್ಳಲು ಇಲ್ಲಿಯ ಡಿಸಿಎಂ ಟೌನ್ ಶಿಪ್ ಬಳಿಯಿರುವ ರೈಲ್ವೆ ಸ್ಟೇಷನ್​​ಗೆ ತೆರಳಿದ್ದಾನೆ. ಇಲ್ಲಿ ಎರಡು ಹಳಿಗಳಿದ್ದು, ಒಂದು ಹಳಿಯ ಮೇಲೆ ಈತ ನಿಂತಿದ್ದ. ಇನ್ನೊಂದು ಹಳಿಯ ಮೇಲೆ ರೈಲು ಬರುವಾಗ ಬ್ಯಾಕ್‌ ಗ್ರೌಂಡ್‌ ಚೆನ್ನಾಗಿರುತ್ತೆ ಎನ್ನುವ ಕಾರಣಕ್ಕೆ ರೈಲು ಬರುವುದನ್ನು ಸ್ನೇಹಿತರು ಕಾಯುತ್ತಿದ್ದು ಈ ವೇಳೆ ರೈಲು ಬರುವ ಶಬ್ದ ಆಗುತ್ತಿದ್ದಂತೆಯೇ ಫೋಟೋಗೆ ಪೋಸ್‌ ಕೊಟ್ಟಿದ್ದಾನೆ.

ಅವನು ಯಾವ ಹಳಿಯ ಮೇಲೆ ನಿಂತಿದ್ದನೋ ಅದೇ ಹಳಿಯ ಮೇಲೆ ರೈಲು ಬಂದಿದ್ದು, ಆತನಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಸ್ಥಳಕ್ಕೆ ರೈಲ್ವೆ ಮತ್ತು ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೊಸೆಯಿಂದಲೇ ಅತ್ತೆಯ ಕೊಲೆ

ಸಾವಿನಲ್ಲೂ ಒಂದಾದ ತಾಯಿ – ಮಗ

ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದೇ ಬಿಜೆಪಿ ಸರ್ಕಾರದ ಸಾಧನೆ: ಈಶ್ವರ ಖಂಡ್ರೆ

ಒಡಿಶಾದಲ್ಲಿ ವಿಷಾಹಾರ ಸೇವಿಸಿದ್ದ ಕಾರ್ಕಳದ ಯುವಕ ಸಾವು

ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ನಿಧನ

 

ಇತ್ತೀಚಿನ ಸುದ್ದಿ