ಸೆಲ್ಫಿ ವಿಡಿಯೋಗಾಗಿ ಪ್ರಾಣವನ್ನೇ ಕಳೆದುಕೊಂಡ ಬಾಲಕ - Mahanayaka
3:20 AM Wednesday 11 - December 2024

ಸೆಲ್ಫಿ ವಿಡಿಯೋಗಾಗಿ ಪ್ರಾಣವನ್ನೇ ಕಳೆದುಕೊಂಡ ಬಾಲಕ

train
23/11/2021

ಭೋಪಾಲ್: ಸೆಲ್ಫಿ ಹುಚ್ಚಿಗೆ  ಬಾಲಕನೋರ್ವ ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್ ನಲ್ಲಿ ನಡೆದಿದ್ದು, ರೈಲು ಹಳಿಯ ಬದಿಯಲ್ಲಿ ನಿಂತು ಸಿನಿಮಾ ಶೈಲಿಯಲ್ಲಿ ವಿಡಿಯೋ ಮಾಡಲು ಮುಂದಾದ ಬಾಲಕನ ಪ್ರಾಣವೇ ಹೋಗಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರ ಎದೆಯನ್ನು ಝಲ್ಲೆನಿಸುವಂತೆ ಮಾಡಿದೆ. ರೈಲು ಬರುತ್ತಿದ್ದ ವೇಳೆ ಹಳಿಯ ಬದಿಯಲ್ಲಿ ನಡೆದುಕೊಂಡು ಬರುವಂತೆ ತನ್ನ ಸ್ನೇಹಿತನ ಸಹಾಯದೊಂದಿಗೆ ಶೂಟಿಂಗ್ ಮಾಡಲು ಬಾಲಕ ಮುಂದಾಗಿದ್ದಾನೆ. ಆದರೆ, ವೇಗವಾಗಿ ಬಂದ ರೈಲು ಬಾಲಕನ ತಲೆಗೆ ಅಪ್ಪಳಿಸಿದ್ದು, ಪರಿಣಾಮವಾಗಿ ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡು ಬಿದ್ದಿದ್ದ ಬಾಲಕನನ್ನು ತಕ್ಷಣವೇ  ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಬಾಲಕ ಸಾವಿಗೀಡಾಗಿದ್ದಾನೆ.

ನೀನು ವಿಡಿಯೋ ಮಾಡು, ರೈಲು ಹತ್ತಿರಕ್ಕೆ ಬರುತ್ತಿದ್ದಂತೆಯೇ ನಾನು ಸರಿಯುತ್ತೇನೆ ಎಂದು ಸ್ನೇಹಿತನಿಗೆ ಬಾಲಕ ಹೇಳಿದ್ದನೆನ್ನಲಾಗಿದೆ. ಆದರೆ, ಗೂಡ್ಸ್ ರೈಲು ಸಮೀಪಕ್ಕೆ ಬಂದರೂ ಆತನಿಗೆ ತಿಳಿಯಲಿಲ್ಲ, ಈ ವೇಳೆ ರೈಲು ಚಾಲಕ ಹಾರ್ನ್ ಹಾಕಿದರೂ ಬಾಲಕನಿಗೆ ಗಾಬರಿಯಲ್ಲಿ ಹಿಂದಕ್ಕೆ ಸರಿಯಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ರೈಲು ಬ್ರೇಕ್ ಹಾಕುವಷ್ಟರಲ್ಲಿ ಬಾಲಕನಿಗೆ ರೈಲು ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಗಳ ಮೇಲೆಯೇ ಅತ್ಯಾಚಾರ ನಡೆಸುತ್ತಿದ್ದ ತಂದೆಯನ್ನು ಕೊಚ್ಚಿ ಕೊಂದ ಮಗಳ ಸ್ನೇಹಿತರು!

ರಾಜ್ಯ ಪ್ರವಾಹ ಸಂಕಷ್ಟದಲ್ಲಿರುವಾಗ ಬಿಜೆಪಿ—ಕಾಂಗ್ರೆಸ್ ನ ಬೇಜವಾಬ್ದಾರಿಯ ಜನ‘ಜಾತ್ರೆ’

ಮಾಂಸಾಹಾರದ ಬಗ್ಗೆ ಹಿರಿಯ ಪೇಜಾವರ ಶ್ರೀಗಳು ಏನು ಹೇಳಿದ್ದರು? | ವಿಡಿಯೋ ವೈರಲ್

ಕಪ್ಪದ ಮಾನಿ ಹಂದ್ರನ ಬೇಟಿ/ ಪೊದು ಸಂಬಂಧ/ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು: ಸಂಚಿಕೆ: 07

ನನ್ನ ಕಾರು ಅಪಘಾತವಾಗಿಲ್ಲ, ನಾನು ಸುರಕ್ಷಿತವಾಗಿದ್ದೇನೆ | ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ

ಪತ್ನಿಯನ್ನು ನಾಲೆಯಲ್ಲಿ ಮುಳುಗಿಸಿ ಕೊಂದು ಹೈಡ್ರಾಮಾ ಆಡಿದ ಪತಿ | ಪೊಲೀಸರಿಗೆ ಈತ ಸಿಕ್ಕಿ ಬಿದ್ದದ್ದು ಹೇಗೆ?

ಇತ್ತೀಚಿನ ಸುದ್ದಿ