ಎಲ್ಲವೂ ಬೆತ್ತಲೆಯಾಗಿ ಕಾಣುವ ಕನ್ನಡಕ ಮಾರಾಟ: ನಾಲ್ವರನ್ನು ಬಂಧಿಸಿದ ಪೊಲೀಸರು!
ಚೆನ್ನೈ: ಎಲ್ಲವೂ ಬೆತ್ತಲೆಯಾಗಿ ಕಾಣುವ ಕನ್ನಡಕ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಪುರುಷರನ್ನು ಚೆನ್ನೈ ಪೊಲೀಸರು ಬಂಧಿಸಿದ್ದು, ಇವರು ಈ ಕನ್ನಡಕ ಧರಿಸಿದರೆ ಮುಂದೆ ಇರುವವರು ಬೆತ್ತಲಾಗಿ ಕಾಣುತ್ತಾರೆ ಎಂದು ನಂಬಿಸಿ, ಸಾರ್ವಜನಿಕರಿಂದ ದೊಡ್ಡ ಮೊತ್ತದ ಹಣವನ್ನು ದೋಚುತ್ತಿದ್ದರು ಎಂದು ಹೇಳಲಾಗಿದೆ.
ಬೆಂಗಳೂರಿನ ನಿವಾಸಿಗಳಾದ ಶಿವ ಅಲಿಯಾಸ್ ಸೂರ್ಯ (39), ಕುಗೈಪ್ (37), ಜಿತು (24) ಮತ್ತು ಇರ್ಷಾದ್ (21) ಎಂಬ ನಾಲ್ವರು ಬಂಧಿತರು ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಕೋಯಂಬೇಡು ಬಸ್ ನಿಲ್ದಾಣದ ಬಳಿಯ ಲಾಡ್ಜ್ ನ ಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಅಲ್ಲಿ ಪಿಸ್ತೂಲ್, ಗುಂಡುಗಳು, ಕೆಲವು ಲೋಟಗಳು ಮತ್ತು ರೈಸ್ ಪುಲ್ಲಿಂಗ್ ಯಂತ್ರಗಳು(ನಗ್ನವಾಗಿ ಕಾಣುಂತಹ ಕನ್ನಡಕ) ಪತ್ತೆಯಾಗಿದೆ.
ರೈಸ್ ಪುಲ್ಲಿಂಗ್ ಮಾಡುವ ಪುರಾತನ ಕಾಲದ ಕೋಟ್ಯಂತರ ರೂಪಾಯಿ ಬೆಲೆ ಬಾಳು ವಸ್ತುವನ್ನು ಕೊಡುವುದಾಗಿ ನಂಬಿಸಿ ಸಾರ್ವಜನಿರಿಗೆ ಮಾರಾಟ ಮಾಡಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಿಡಿಲು ಬಡಿದ ಚೆಂಬಿನಿಂದ ರೈಸ್ ಪುಲ್ಲಿಂಗ್ ಮಾಡಲು ಸಾಧ್ಯ ಎಂದು ಜನರನ್ನು ನಂಬಿಸುತ್ತಿದ್ದರು. ತಮ್ಮ ಎದುರಿಗಿರುವವರನ್ನು ಬೆತ್ತಲೆಯಾಗಿ ಕಾಣಲು ಸಹಾಯ ಮಾಡುವ ಕನ್ನಡಕವನ್ನು ಮಾರಾಟ ಮಾಡುವ ನೆಪದಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡುತ್ತಿದ್ದರು. ಈ ಕನ್ನಡಕವನ್ನು ಪಡೆಯಲು ಲಾಡ್ಜ್ ನಲ್ಲಿ ಜನ ಮುಗಿಬಿದ್ದಿದ್ದು, ಈ ವೇಳೆ ನಕಲಿ ಪಿಸ್ತೂಲ್ ನಿಂದ ಬೆದರಿಸಿ ಸಾರ್ವಜನಿಕರ ಹಣ ದೋಚಿದ್ದಾರೆ ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw