ಸೇನೆಯ ವಾಹನ ನದಿಗೆ ಉರುಳಿ 7 ಯೋಧರು ಹುತಾತ್ಮರಾಗಿದ್ದು, 19 ಮಂದಿ ಗಾಯ - Mahanayaka

ಸೇನೆಯ ವಾಹನ ನದಿಗೆ ಉರುಳಿ 7 ಯೋಧರು ಹುತಾತ್ಮರಾಗಿದ್ದು, 19 ಮಂದಿ ಗಾಯ

ladak
27/05/2022

ಲಡಾಖ್: ಜಮ್ಮು ಮತ್ತು ಕಾಶ್ಮೀರದ ಲಡಾಖ್ ಜಿಲ್ಲೆಯಲ್ಲಿ ಸೇನಾ ವಾಹನವೊಂದು ನದಿಗೆ ಉರುಳಿ ಏಳು ಯೋಧರು ಮೃತಪಟ್ಟಿದ್ದಾರೆ.  19 ಯೋಧರು ಗಾಯಗೊಂಡಿದ್ದಾರೆ.  ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಲಡಾಖ್‌ ನ ತುರ್ಕು ಸೆಕ್ಟರ್‌ ನಲ್ಲಿ ಈ ದುರ್ಘಟನೆ ನಡೆದಿದ್ದು,  ಗಂಭೀರವಾಗಿ ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗಳಿಗೆ ವರ್ಗಾಯಿಸಲು ವಾಯುಪಡೆಯ ಸಹಾಯವನ್ನು ಕೋರಿದ್ದಾರೆ.  ವಾಹನದಲ್ಲಿ 26 ಮಂದಿ ಇದ್ದು ಸೈನಿಕರ ಗುಂಪೊಂದು ಪರ್ತಾಪುರದಿಂದ ಹನೀಫ್‌ ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.  ಥಾಯ್ಸ್‌ ನಿಂದ 25 ಕಿ.ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ.

ರಸ್ತೆಯಿಂದ 50-60 ಅಡಿ ಆಳದಲ್ಲಿರುವ ಶಿಯೋಕ್ ನದಿಗೆ ವಾಹನ ಉರುಳಿದೆ.ವಾಹನದಲ್ಲಿದ್ದ ಎಲ್ಲರನ್ನೂ ಪಾರ್ಥಪುರದ ಫೀಲ್ಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.  ತಜ್ಞ ವೈದ್ಯರು ಸೇರಿದಂತೆ ನುರಿತ ತಂಡವನ್ನು ಪರ್ತಾಪುರಕ್ಕೆ ಕಳುಹಿಸಲಾಗಿದೆ.  ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಸೇನೆ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೂತ್ರದಿಂದ ತಯಾರಾಗುವ ಬಿಯರ್: ಸೂಪರ್‌ ಟೇಸ್ಟ್ ಎನ್ನುತ್ತಿದ್ದಾರೆ ಮದ್ಯಪಾನಿಗಳು!

ಕ್ರೂಸ್ ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್

ಸಾಮೂಹಿಕ ಅತ್ಯಾಚಾರದ ಆರೋಪಿಯನ್ನು ಗುಂಡಿಕ್ಕಿ ಹತ್ಯೆ

ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು

 

ಇತ್ತೀಚಿನ ಸುದ್ದಿ