90ನೇ ವರ್ಷ ಹುಟ್ಟು ಹಬ್ಬಕ್ಕೆ ಆಹ್ವಾನಿಸಿದ ಹಿರಿಯ ನಾಗರಿಕ: ಆಮಂತ್ರಣಕ್ಕೆ ಮಲೆನಾಡಿಗರು ಫಿದಾ

17/04/2025
ಕೊಟ್ಟಿಗೆಹಾರ: 90 ವರ್ಷದ ಹಿರಿಯ ನಾಗರಿಕರೊಬ್ಬರು ತಮ್ಮ ಹುಟ್ಟು ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ. ಕಲ್ಯಾಣ ಮಂಟಪದಲ್ಲಿ ಹುಟ್ಟು ಹಬ್ಬ ಆಯೋಜನೆ ಮಾಡಿ ಎಲ್ಲರಿಗೂ ಆಹ್ವಾನ ನೀಡಿದ್ದಾರೆ.
90 ವರ್ಷದ ಹಿರಿಯ ನಾಗರಿಕ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಸಿದ್ದೇಗೌಡ ಪ್ರೀತಿ ಪೂರ್ವಕವಾಗಿ ಬರೆದ ಆಮಂತ್ರಣ ಪತ್ರಿಕೆಗೆ ಮಲೆನಾಡಿಗರು ಫಿದಾ ಆಗಿದ್ದಾರೆ.
ಇದೇ ಶನಿವಾರ ಹುಟ್ಟು ಹಬ್ಬವಿದೆ, ಎಲ್ಲರೂ ಬರುವಂತೆ ಸಿದ್ದೇಗೌಡ ಆಹ್ವಾನಿಸಿದ್ದಾರೆ. “ನಿಮ್ಮನ್ನೆಲ್ಲಾ ನೋಡುವ ಆಸೆ, ಮಾತನಾಡಿಸಬೇಕೆಂದ ಬಯಕೆ, ಜೊತೆ ಕೂತು ನಿಮ್ಮೊಂದಿಗೆ ಊಟ ಮಾಡಿ, ಹರಟೆ ಹೊಡೆಯುವ ಹೆಬ್ಬಯಕೆ ಎಂದು ತಮ್ಮ ಆಮಂತ್ರಣ ಪತ್ರಿಕೆಯಲ್ಲಿ ಅವರು ಬರೆದುಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: