ಸರ್ವರ್ ಸಮಸ್ಯೆ, ಪಡಿತರ ಚೀಟಿ ತಿದ್ದುಪಡಿ ಅವಕಾಶ ವಿಸ್ತರಣೆಗೆ ಡಿವೈಎಫ್ ಐ ಆಗ್ರಹ - Mahanayaka

ಸರ್ವರ್ ಸಮಸ್ಯೆ, ಪಡಿತರ ಚೀಟಿ ತಿದ್ದುಪಡಿ ಅವಕಾಶ ವಿಸ್ತರಣೆಗೆ ಡಿವೈಎಫ್ ಐ ಆಗ್ರಹ

dyfi
14/09/2023


Provided by

ಚಾಲ್ತಿಯಲ್ಲಿರುವ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ/ತೆಗೆಯುವುದು, ವಿಳಾಸ ಬದಲಾವಣೆ ಹೆಸರು ತಿದ್ದುಪಡಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಸೇವಾ ಸಿಂಧು ಗ್ರಾಹಕ ಸೇವಾ ಕೇಂದ್ರಗಳಲ್ಲಿ ಅವಕಾಶ ನೀಡಿ ಪ್ರಕಟಣೆ ನೀಡಿತ್ತು. ಆದರೆ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಸೇವಾಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತು ಕಂಗಲಾಗಿದ್ದಾರೆ ಎಂದು ಡಿವೈಎಫ್ ಐ ಜಿಲ್ಲಾ ಸಮಿತಿ ಆಪಾದಿಸಿದೆ. ಮಂಗಳೂರು ನಗರದ ವಿವಿಧ ಸೇವಾ ಕೇಂದ್ರಗಳಿಗೆ ಡಿವೈಎಫ್ ಐ ನಿಯೋಗ ಭೇಟಿ ನೀಡಿದ್ದು ಜನರ ಸಂಕಷ್ಟಗಳ ಬಗ್ಗೆ ಜಿಲ್ಲಾಡಳಿತ ರಾಜ್ಯ ಸರಕಾರದ ಗಮನ ಸೆಳೆಯಬೇಕೆಂದು ಡಿವೈಎಫ್ ಐ ಜಿಲ್ಲಾ ಸಮಿತಿ ಆಗ್ರಹಿಸಿದೆ.


Provided by

ಆಹಾರ ಇಲಾಖೆ ಸುಧೀರ್ಘ ಕಾಲದ ನಂತರ ಕೇವಲ ಮೂರು ದಿನಗಳ ಕಾಲಾವಾಕಾಶ ನೀಡಿರುವುದು ಸರಿಯಾದ ಕ್ರಮವಲ್ಲ ಇದರಿಂದಾಗಿ ಜನರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದಂತಾಗುತ್ತದೆ. ಸರ್ವರ್ ವೈಫಲ್ಯದಿಂದಾಗಿ ಸೇವಾಕೇಂದ್ರಗಳಲ್ಲಿ ಜನರು ತುಂಬಿ ಹೋಗಿದ್ದಾರೆ ಬೆರಳೆಣಿಕೆಯ ಜನರಿಗೆ ಮಾತ್ರ ತಿದ್ದುಪಡಿಯ ಪ್ರಯೋಜನ ಪಡೆಯಲು ಸಾಧ್ಯವಾಗಿದೆ ಬಹುತೇಕ ಜನರಿಗೆ ಸರ್ವರ್ ಸಮಸ್ಯೆಯಿಂದ ಅನೇಕ ಜನರಿಗೆ ತಿದ್ದುಪಡಿ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ ಹಿರಿಯ ನಾಗರಿಕರು ಮಹಿಳೆಯರಿಗೆ ತೀವ್ರ ತೊಂದರೆ ಆಗುತ್ತಿದೆ.

ಸೈಬರ್ ಕೇಂದ್ರಗಳು ಸರ್ವರ್ ಸಮಸ್ಯೆಯಿಂದ ಇತರ ಕೆಲಸಗಳಿಗೆ ತೊಂದರೆ ಆಗುತ್ತದೆ ಎಂದು ಪಡಿತರ ತಿದ್ದುಪಡಿಯ ಕೆಲಸವನ್ನು ಸ್ಥಗಿತಗೊಳಿಸಿವೆ ಪಡಿತರ ಚೀಟಿ ಸರಿ ಮಾಡಲಿಕ್ಕಾಗಿ ಕಳೆದೆರಡು ದಿನಗಳಿಂದ ಕೆಲಸಕ್ಕೆ ರಜೆ ಹಾಕಿ ಸೇವಾ ಕೇಂದ್ರದ ಮುಂದೆ ರಾತ್ರಿವರೆಗೆ ಸಾಲಲ್ಲಿ ನಿಂತರೂ ಜನರಿಗೆ ನಷ್ಟವೇ ಹೊರತು ಯಾವುದೇ ಪ್ರಯೋಜನ ಆಗುತ್ತಿಲ್ಲ. ಇದರಿಂದಾಗಿ ಬಡವರು, ಕೆಳ ಮಧ್ಯಮ ವರ್ಗದ ಜನರು ಸರಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಲಿದ್ದಾರೆ ಡಿವೈಎಫ್ ಐ ಆರೋಪಿಸಿದೆ.


Provided by

ಸಾರ್ವಜನಿಕರ ಅನುಕೂಲತೆಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿದ್ದುಪಡಿಯ ತಂತ್ರಾಂಶದಲ್ಲಿ ಸೇವಾ ಕೇಂದ್ರದಲ್ಲಿ ನಿರ್ದಿಷ್ಟ ಅವಧಿಯನ್ನು ತೆರವುಗೊಳಿಸಿ ನಿರಂತರ ಸೇವೆಗೆ ಅನುಕೂಲ ಮಾಡಿಕೊಡಬೇಕಾಗಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ