ಸೇತುವೆ ಬಳಿ ಪತ್ತೆಯಾಗಿದ್ದ ನವಜಾತ ಶಿಶು ಸಾವು
ಕಾರ್ಕಳ: ಕಾರ್ಕಳ ನಗರದ ಹೊರವಲಯದ ಪತ್ತೊಂಜಿಕಟ್ಟೆ ಪೊಲ್ಲಾರು ಎಂಬಲ್ಲಿ ಕಿರುಸೇತುವೆ ಬಳಿ ಜೂ 21 ರಂದು ಸಂಜೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.
ಸೇತುವೆ ಪಕ್ಕದಲ್ಲಿರುವ ಮನೆಯವರಿಗೆ ಮಗು ಅಳುವ ಶಬ್ದ ಕೇಳಿ ಬಂದ ಹಿನ್ನಲೆಯಲ್ಲಿ ಶಬ್ದ ಎಲ್ಲಿಂದ ಕೇಳಿ ಬರುತ್ತಿದೆ ಎಂದು ಶೋಧ ನಡೆಸಿದಾಗ ಕಿರು ಸೇತುವೆ ಕೆಳಭಾಗದಲ್ಲಿ ಮಗು ಇರುವುದು ಕಂಡುಬಂದಿದೆ. ಪೊಲೀಸರಿಗೆ ಮಾಹಿತಿ ನೀಡಿ ಅವರು ವಿಚಾರಣೆ ನಡೆಸಿ ಆಂಬ್ಯುಲೆನ್ಸ್ ಮೂಲಕ ಮಗುವನ್ನು ಠಾಣೆಗೆ ಕರೆತಂದಿದ್ದಾರೆ.
ಆದಾಗಲೇ ಮಗು ಉಸಿರು ನಿಲ್ಲಿಸಿತ್ತು. ಮಳೆಯಿಂದಾಗಿ ಮಗು ಪ್ರಾಣ ಬಿಟ್ಟಿರಬಹುದು ಎನ್ನಲಾಗಿದೆ. ನವಜಾತ ಶಿಶುವನ್ನು ಸೇತುವೆ ಪಕ್ಕ ಬಿಸಾಕಿ ಹೋಗಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಗುವಿನ ಜೀವ ಉಳಿಸು ಎಂದು ಶಿಲುಬೆ ಮುಂದೆ ಮಲಗಿಸಿದ ತಂದೆ ತಾಯಿ!
ವಿರೋಧ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿಯ ಹೆಸರು ಘೋಷಣೆ!
ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ
ಅಂಗನವಾಡಿ ಕಾರ್ಯಕರ್ತೆ ಸಹಿತ ಐವರ ಮಕ್ಕಳ ಮೇಲೆ ಬಿದ್ದ ಗಂಜಿ ನೀರು
ಶಾಸಕ ರಾಮ್ ದಾಸ್ ಬೆನ್ನಿಗೆ ಗುದ್ದುವಷ್ಟು ಪ್ರೀತಿ ಮೋದಿಜಿಗೆ ಯಾಕೆ?: ರಾಮ್ ದಾಸ್ ಏನು ಹೇಳಿದ್ರು?