ಡಿಸೆಂಬರ್ 6ರಂದು ಶಬರಿಮಲೆ ಯಾತ್ರೆಗೆ ಸಿದ್ಧತೆ ನಡೆಸಿದ್ದರಂತೆ ಹಿರಿಯ ನಟ ಶಿವರಾಮ್  - Mahanayaka
10:08 PM Tuesday 4 - February 2025

ಡಿಸೆಂಬರ್ 6ರಂದು ಶಬರಿಮಲೆ ಯಾತ್ರೆಗೆ ಸಿದ್ಧತೆ ನಡೆಸಿದ್ದರಂತೆ ಹಿರಿಯ ನಟ ಶಿವರಾಮ್ 

shivaram ayyappa
04/12/2021

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್  ಅವರು ಇಂದು ನಿಧನರಾಗಿದ್ದಾರೆ. ಅಯ್ಯಪ್ಪನ ಪೂಜೆ ಮಾಡಲು ತಮ್ಮ ರೂಮ್ ಗೆ ಹೋಗಿದ್ದ ವೇಳೆ ಶಿವರಾಮ್ ಅವರು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಪ್ರತೀ ವರ್ಷ ಅಯ್ಯಪ್ಪ ಸ್ವಾಮಿಯ ವೃತವನ್ನು ತಪ್ಪದೇ ಅವರು ಕೈಗೊಳ್ಳುತ್ತಿದ್ದರು. ಇದೀಗ ಅವರು ತಮ್ಮ ಜೀವನದ ಕೊನೆಯ ಕ್ಷಣದಲ್ಲಿ ಕೂಡ ಅಯ್ಯಪ್ಪನ ಪೂಜೆಗಾಗಿಯೇ ತಮ್ಮ ರೂಮ್ ಗೆ ತೆರಳಿದ್ದರು.

ಅಯ್ಯಪ್ಪನ ಪರಮ ಭಕ್ತರಾಗಿದ್ದ ಶಿವರಾಮ್ ಅವರು ಚಿತ್ರರಂಗದ ಹಲವು ಖ್ಯಾತ ನಟರನ್ನು ತಮ್ಮ ಜೊತೆಗೆ ಶಬರಿಮಲೆ ಯಾತ್ರೆಗೆ ಕರೆದೊಯ್ಯುತ್ತಿದ್ದರು. ಈ ಬಾರಿಯೂ ಮಾಲೆ ಧರಿಸಿ ಶಬರಿಮಲೆ ಯಾತ್ರೆಗೆ ತೆರಳಲು ಅವರು ಸಿದ್ಧರಾಗಿದ್ದರು. ಡಿಸೆಂಬರ್ 6ರಂದು ಅವರು ಶಬರಿಮಲೆ ಯಾತ್ರೆ ಕೈಗೊಳ್ಳಬೇಕಿತ್ತು. ಆದರೆ, ಈ ನಡುವೆ ನಡೆಯಬಾರದ ಘಟನೆ ನಡೆದು ಶಿವರಾಮ್ ಅವರು ಇಹಲೋಕ ತ್ಯಜಿಸಿದ್ದಾರೆ.

ಶಿವರಾಮ್ ಅವರ ಜೊತೆಗೆ  ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್, ಪ್ರೇಮ್, ಜೈಜಗದೀಶ್ ಸೇರಿದಂತೆ ಅನೇಕ ಖ್ಯಾತ ನಟರು ಮಾಲೆಧರಿಸಿ ಶಬರಿಮಲೆಗೆ ಯಾತ್ರೆ ನಡೆಸಿದ್ದರು. ಹಲವಾರು ವರ್ಷಗಳಿಂದಲೂ ಶಿವರಾಮ್ ಅವರು ಗುರುಸ್ವಾಮಿಗಳಾಗಿ ತಮ್ಮ ಶಿಷ್ಯರನ್ನು ಶಬರಿಮಲೆ ಯಾತ್ರೆಗೆ ಕರೆದೊಯ್ಯುತ್ತಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬದುಕಿನ ದಾರಿ ಮುಗಿಸಿ ಹೊರಟೇ ಬಿಟ್ಟರು: ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರ ಜೊತೆಗೆ ನಟಿಸಿದ್ದ ಶಿವರಾಮಣ್ಣ

ಪೊಲೀಸರನ್ನು ನಾಯಿಗಳು ಎಂದು ನಿಂದನೆ: ಗೃಹ ಸಚಿವರ ವಿರುದ್ಧವೇ ದೂರು ದಾಖಲು

ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿದ ನಗರ ಪಾಲಿಕೆ: ಕತ್ತುಕೊಯ್ದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ

ಈಶ್ವರಪ್ಪ ಪೆದ್ದ, ಅವರ ನಾಲಿಗೆಗೂ ಮೆದುಳಿಗೂ ಲಿಂಕ್ ಇಲ್ಲ | ಸಿದ್ದರಾಮಯ್ಯ ವ್ಯಂಗ್ಯ

ಯುವತಿಯ ಎದುರು ಓಲಾ ಕ್ಯಾಬ್ ಚಾಲಕನಿಂದ ಅಶ್ಲೀಲ ವರ್ತನೆ!

ರಸ್ತೆಗೆ ತೆಂಗಿನ ಕಾಯಿ ಒಡೆದು ಉದ್ಘಾಟನೆ: ತೆಂಗಿನ ಕಾಯಿ ಬದಲು ಬಿರುಕು ಬಿಟ್ಟ ರಸ್ತೆ | ಬಿಜೆಪಿ ಶಾಸಕಿಗೆ ಮುಜುಗರ

ಇತ್ತೀಚಿನ ಸುದ್ದಿ