ಕ್ರೂಸರ್ ಹಡಗಿನಲ್ಲಿ ರೇವ್ ಪಾರ್ಟಿ: ಎನ್ ಸಿಬಿಯಿಂದ ಶಾರೂಖ್ ಪುತ್ರನ ವಿಚಾರಣೆ
ಮುಂಬೈ: ಸಮುದ್ರದ ಮಧ್ಯೆ ಕ್ರೂಸರ್ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 10 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನೂ ಈ ಸಂಬಂಧ ಎನ್ ಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ ಎಂದು ವರದಿಯಾಗಿದೆ.
ಮುಂಬೈನ ಐಷಾರಾಮಿ ಹಡಗೊಂದರಲ್ಲಿ ಈ ಅದ್ದೂರಿ ಪಾರ್ಟಿಯನ್ನು ಆಯೋಜಿಸಲಾಗಿದ್ದು, 600ಕ್ಕೂ ಅಧಿಕ ಹೈಪ್ರೊಫೈಲ್ ವ್ಯಕ್ತಿಗಳು ಭಾಗಿಯಾಗಿದ್ದರು. ಪಾರ್ಟಿಯಲ್ಲಿ ಭಾಗಿಯಾಗಲು ಒಬ್ಬ ವ್ಯಕ್ತಿಗೆ ತಲಾ 80ರಿಂದ ಸಾವಿರದಿಂದ 2 ಲಕ್ಷ ರೂಪಾಯಿ ಟಿಕೆಟ್ ದರ ವಿಧಿಸಲಾಗಿತ್ತು ಎಂದು ಹೇಳಲಾಗಿದೆ.
ಈ ರೇವ್ ಪಾರ್ಟಿಗೆ ಎಲ್ಲಾ ಹೈಪ್ರೊಫೈಲ್ ವ್ಯಕ್ತಿಗಳಿಗೆ ಇನ್ ಸ್ಟಾ ಮೂಲಕ ಆಹ್ವಾನ ನೀಡಲಾಗಿತ್ತು. ಅಲ್ಲದೇ ಪಾರ್ಟಿಯಲ್ಲಿ ಡಿಜೆ ಅರೇಂಜ್ ಮಾಡಲಾಗಿತ್ತು. ಕೋಕೇನ್, ಹಾಶಿಶ್ ಸೇರಿದಂತೆ ವಿವಿಧ ಮಾದರಿಯ ಡ್ರಗ್ಸ್ ನ್ನು ದಾಳಿಯ ವೇಳೆ ಎನ್ ಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ.
ಇನ್ನೂ ಇದೊಂದು ಗಂಭೀರ ಪ್ರಕರಣವಾಗಿರುವ ಕಾರಣ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಈಗ ಸಾಧ್ಯವಿಲ್ಲ ಎಂದು ಎನ್ ಸಿಬಿ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಅತ್ಯಾಚಾರದ ಆರೋಪ ಹೊರಿಸಿ ಯುವಕನ ಬರ್ಬರ ಹತ್ಯೆ: ಆರೋಪಿಗಳ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
ಅಂಜನಾದ್ರಿ ಬೆಟ್ಟದಿಂದ ಅಂಗಡಿ ತೆರವು ಮಾಡಲು ಅನ್ಯ ಧರ್ಮೀಯರಿಗೆ ಬೆದರಿಕೆ: ಅತುಲ್ ಕುಮಾರ್ ವಿರುದ್ಧ ಎಫ್ ಐಆರ್
ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ ‘ಜೈ ಭೀಮ್’ ಬಹುನಿರೀಕ್ಷಿತ ಚಿತ್ರ