ಮುಸ್ಲಿಮರನ್ನು ಕಂಡ್ರೆ ಯಾಕೆ ದ್ವೇಷ..? ಪ್ರಧಾನಿಯವರೇ, ‘ಮುಸ್ಲಿಮರ ಮನ್ ಕೀ ಬಾತ್’ ಕೇಳಿ ಎಂದ ಶಾಹಿ ಇಮಾಮ್ ಸೈಯದ್
ವಿಶ್ವದಲ್ಲಿ 57 ಮುಸ್ಲಿಂ ರಾಷ್ಟ್ರಗಳಿವೆ. ಅಲ್ಲಿ ಮುಸ್ಲಿಮೇತರರೂ ಇದ್ದಾರೆ. ಆದರೆ ಅಲ್ಲಿ ಯಾರಿಗೂ ತೊಂದರೆ ಆಗುತ್ತಿಲ್ಲ. ಆದ್ರೆ ಭಾರತದಲ್ಲಿ ಹಿಂದೂ ಮುಸ್ಲಿಮರ ನಡುವಿನ ಸಂಬಂಧ ಅಪಾಯದಂಚಿನಲ್ಲಿದೆ. ದೇಶದಲ್ಲಿ ಯಾಕೆ ಮುಸ್ಲಿಮರನ್ನ ಕಂಡರೆ ಇಷ್ಟೊಂದು ದ್ವೇಷ..? ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮುಸ್ಲಿಮರ ಮನದ ಮಾತನ್ನೂ ಕೇಳಿ, ಅವರ ಸಮಸ್ಯೆಗಳನ್ನ ಬಗೆಹರಿಸಬೇಕು ಎಂದು ಜಾಮಾ ಮಸೀದಿಯ ಮೌಲ್ವಿ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಮನವಿ ಮಾಡಿದ್ದಾರೆ.
ಅವರು ಹರ್ಯಾಣದ ನೂಹ್ ಜಿಲ್ಲೆಯ ಗಲಭೆಗಳು ಹಾಗೂ ಚಲಿಸುತ್ತಿದ್ದ ರೈಲಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣಗಳನ್ನ ಉಲ್ಲೇಖಿಸಿ ಜಾಮಾ ಮಸೀದಿಯಲ್ಲಿ ನಡೆದ ಧರ್ಮ ಉಪದೇಶದಲ್ಲಿ ಮಾತನಾಡಿದ್ದಾರೆ. ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ. ದ್ವೇಷದ ಅಲೆಗಳು ದೇಶದ ಶಾಂತಿ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುತ್ತಿವೆ. ಮೋದಿ ಅವರೇ ನೀವು ಮನ್ ಕಿ ಬಾತ್ ಹೇಳುತ್ತೀರಿ. ಅದೇ ರೀತಿ ಮುಸ್ಲಿಮರ ಮನ್ ಕಿ ಬಾತ್ ಅನ್ನೂ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚಿನ ಘಟನೆಗಳಿಂದ ದೇಶದ ಮುಸ್ಲಿಮರು ತೊಂದರೆಗೀಡಾಗಿದ್ದಾರೆ. ಅವರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ದ್ವೇಷ ಮತ್ತು ಹಿಂಸಾಚಾರ ಎದುರಿಸುವಲ್ಲಿ ಕಾನೂನು ದುರ್ಬಲವಾಗಿದೆ ಎಂದು ಸಾಬೀತುಪಡಿಸುತ್ತಿದೆ. ಒಂದು ಧರ್ಮದ ಜನರಿಗೆ ಬಹಿರಂಗವಾಗಿ ಬೆದರಿಕೆ ಹಾಕಲಾಗುತ್ತಿದೆ. ಮುಸ್ಲಿಮರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಅವರೊಂದಿಗೆ ವ್ಯಾಪಾರ ವಹಿವಾಟು ನಡೆಸದಂತೆ ಬಹಿಷ್ಕರಿಸಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw