ಪ. ಜಾತಿಯ ಮಕ್ಕಳ ಶಾಲಾ ಪ್ರವೇಶ ಅರ್ಜಿಯ  ಧರ್ಮ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಲು ಮನವಿ - Mahanayaka

ಪ. ಜಾತಿಯ ಮಕ್ಕಳ ಶಾಲಾ ಪ್ರವೇಶ ಅರ್ಜಿಯ  ಧರ್ಮ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಲು ಮನವಿ

ambedkar sene
15/07/2021

ಸುರಪುರ: ಪರಿಶಿಷ್ಟ ಜಾತಿಯ ಮಕ್ಕಳ ಶಾಲಾ ಪ್ರವೇಶ ಅರ್ಜಿಯಲ್ಲಿನ ಧರ್ಮ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಬೇಕು ಎಂದು ಮೂಲನಿವಾಸಿ ಅಂಬೇಡ್ಕರ್ ಸೇನೆಯ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿ ಜಗದೀಶ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಸೇನೆಯ ರಾಜ್ಯ ಸಂಘಟನಾ ಸಂಚಾಲಕ ರಾಹುಲ ಹುಲಿಮನಿ ಮಾತನಾಡಿ, ಪ್ರವೇಶಾತಿ ಸಂದರ್ಭದಲ್ಲಿ ಪೋಷಕರು ಧರ್ಮ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಲು ಹೇಳಿದರೆ ಶಾಲೆಯ ಸಿಬ್ಬಂದಿ ಯಾವುದೇ ಅಡೆತಡೆ ಮಾಡಬಾರದು ಎಂದರು.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಎಲ್ಲ ಶಾಲೆಗಳಿಗೆ ಮುಖ್ಯ ಗುರುಗಳಿಗೆ ಸುತ್ತೋಲೆ ಹೊರಡಿಸಿ ಈ ಬಗ್ಗೆ ಸ್ಪಷ್ಟ ಸೂಚನೆ ಕೊಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ವೆಂಕಟೇಶ ಬಡಿಗೇರ, ಹಣಮಂತ ರತ್ತಾಳ, ರಾಜು ಬಡಿಗೇರ, ಶಿವಣ್ಣ ಸಾಸಿಗೇರ ಇತರರು ಇದ್ದರು.

ಇನ್ನಷ್ಟು ಸುದ್ದಿಗಳು:

ಬೌದ್ಧ ಧರ್ಮ ಕಟ್ಟಲು ಡಾ.ಅಂಬೇಡ್ಕರರು ರೂಪಿಸಿದ್ದ ನೀಲನಕ್ಷೆ

ಮಣ್ಣಿನಡಿಯಲ್ಲಿ ಸಮಾಧಿ ಮಾಡಲಾಗಿದ್ದ ಪುರಾತನ  ಬೌದ್ಧ ವಿಹಾರ ಪತ್ತೆ

ಪ್ರೊ.ಲಕ್ಷ್ಮಿ ನರಸು: ನಿಧನರಾಗಿ 65 ವರ್ಷಗಳ ನಂತರ ಕೃತಿ ಪ್ರಕಟಗೊಂಡ ಶ್ರೇಷ್ಠ ಬೌದ್ಧ ವಿದ್ವಾಂಸರೊಬ್ಬರ ಕತೆ

ಪ್ರತಿಯೊಂದರ ಸ್ವಭಾವ ಅರಿತು ಜೀವಿಸಬೇಕು | ಗೌತಮ ಬುದ್ಧ

 

ಇತ್ತೀಚಿನ ಸುದ್ದಿ