ಶಾಲೆಯ ಆವರಣದಲ್ಲಿಯೇ ಶಿಕ್ಷಕನಿಂದ ಎಣ್ಣೆ ಪಾರ್ಟಿ | ವಿಡಿಯೋ ವೈರಲ್ ಆದ ಬಳಿಕ ಆಗಿದ್ದೇನು ಗೊತ್ತಾ?

01/03/2021

ಮಧ್ಯಪ್ರದೇಶ: ಶಿಕ್ಷಕರೊಬ್ಬರು ಶಾಲೆಯ ಆವರಣದ ಒಳಗೆಯೇ ಶಾಲಾ ಸಿಬ್ಬಂದಿಯ ಜೊತೆಗೆ ಎಣ್ಣೆ ಪಾರ್ಟಿ ನಡೆಸಿದ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಪ್ರೌಢ ಶಾಲೆಯಲ್ಲಿ ನಡೆದಿದ್ದು, ಘಟನೆಗೆ ಬೆಳಕಿಗೆ ಬರುತ್ತಿದ್ದಂತೆಯೇ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಸಿಯೋನಿ ಜಿಲ್ಲೆಯ ಗಣೇಶ್ ಗಂಜ್ ನಗರದ ಲಖ್ನದೋನ್ ಬ್ಲಾಕ್ ನಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸಹಾಯಕ ಶಿಕ್ಷಕ ಸುನೀಲ್ ಕುಮಾರ್, ಕ್ಲರ್ಕ್ ವಿನೋದ್ ಹರ್ಷಲ್ ಮತ್ತು ವಾಚ್ಮ್ಯಾನ್ ಶಿವಕುಮಾರ್ ಎಂಬವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಲಾಗಿದೆ.

ಶಾಲಾ ಆವರಣದಲ್ಲಿ ಶಿಕ್ಷಕ ಹಾಗೂ ಶಾಲಾ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರಿಗೂ ಶಿಕ್ಷಣ ಇಲಾಖೆ ನೋಟಿಸ್ ನೀಡಿದ್ದು, ಶಾಲಾ ಸಿಬ್ಬಂದಿಯ ಬಗ್ಗೆ  ಮಾಹಿತಿ ನೀಡುವಂತೆ  ಶೋಕಾಸ್ ನೋಟಿಸ್ ನೀಡಲಾಗಿದೆ.

ಇತ್ತೀಚಿನ ಸುದ್ದಿ

Exit mobile version