ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

bhagalakote
26/05/2022

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಸಮೀಪದ ಕ್ಯಾದಿಗೇರಿ ಕ್ರಾಸ್ ಬಳಿ ಶಾಲೆ ಮುಗಿಸಿ ಮನೆಗೆ ಹೊರಟಿದ್ದ ವಿದ್ಯಾರ್ಥಿಗಳಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ವಿದ್ಯಾರ್ಥಿನಿಯರಾದ ನೇತ್ರಾವತಿ ರಗಟಿ ‌(14), ಅಂಜಲಿ ಸೂಡಿ (14) ಸಾವಿಗೀಡಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನ ವೇಗವೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಮಕ್ಕಳು ಐಹೊಳೆಯಿಂದ ಚಿಲ್ಲಾಪುರಕ್ಕೆ ಹೊರಟಿದ್ದರು.ಕೆಎ 29 ಎನ್ 9146 ನೋಂದಣಿ ಸಂಖ್ಯೆಯ ಈ ಕಾರು ಸಂತೋಷ ಅಮರಿ ಎಂಬವರ ಹೆಸರಿನಲ್ಲಿದೆ.

ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಲಾ ಬಾಲಕಿಯ ಮೇಲೆಯೇ ಹರಿದ ಬಸ್: ಬಾಲಕಿ ಸ್ಥಳದಲ್ಲೇ ಸಾವು

ಊಟ ಇಲ್ಲ ಎಂದಿದ್ದಕ್ಕೆ ಹೊಟೇಲ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಎಲ್ಲ ಮಸೀದಿ ಅಗೆಯೋಣ, ಶಿವಲಿಂಗ ಸಿಕ್ಕರೆ ನಮ್ಮದು, ಹೆಣ ಸಿಕ್ಕರೆ ನಿಮ್ಮದು: ಬಿಜೆಪಿ ಮುಖಂಡನ ಹೇಳಿಕೆ!

ಆರೆಸ್ಸೆಸ್, ಬಿಜೆಪಿ ಮೊದಲು ಕೈ ಹಾಕುವುದು ಶಿಕ್ಷಣ, ಇತಿಹಾಸದ ಕುತ್ತಿಗೆಗೆ: ದೇವನೂರು ಮಹದೇವ

ಇತ್ತೀಚಿನ ಸುದ್ದಿ

Exit mobile version