ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್ - Mahanayaka
4:24 PM Wednesday 11 - December 2024

ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್

raj kundra hamitha shilpa
25/07/2021

ಮುಂಬೈ: ಅಶ್ಲೀಲ ವಿಡಿಯೋ ತಯಾರಿಕೆಗೆ ಸಂಬಂಧಿಸಿದಂತೆ  ನಟಿ ಶಿಲ್ಪಾ ಶೆಟ್ಟಿ ಪತಿ ರಾಜ ಕುಂದ್ರಾನನ್ನು  ಪೊಲೀಸರು ಬಂಧಿಸಿದ್ದಾರೆ. ಹಂಗಾಮಾ 2 ಚಿತ್ರದ ಒಟಿಟಿ ಬಿಡುಗಡೆಯ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ಶಿಲ್ಪಾ ಶೆಟ್ಟಿ, ನನ್ನ ಪತಿ “ಅಮಾಯಕ” ಎಂದು ಹೇಳಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿಯ ತಂಗಿ ಶಮಿತಾ ಶೆಟ್ಟಿ ತನ್ನ ಅಕ್ಕನನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಹಂಗಾಮಾ 2 ರಿಲೀಸ್ ಗೆ ಸಂಬಂಧಿಸಿದಂತೆ ಶಮಿತಾ ಶೆಟ್ಟಿ ತನ್ನ ಅಕ್ಕನಿಗೆ ಇನ್ಸ್ಟಾಗ್ರಾಮ್ ನಲ್ಲಿ ಶುಭಕೋರಿದ್ದು, “14 ವರ್ಷಗಳ ಬಳಿಕ  ನಿನ್ನ ನಟನೆಯ ಹಂಗಾಮ 2 ರಿಲೀಸ್ ಆಗುತ್ತಿದೆ. ನಿನಗೆ ಶುಭವಾಗಲಿ. ನೀನು ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೀಯ ಎನ್ನುವುದು ಗೊತ್ತು. ನಾನು ನಿನ್ನ ಜೊತೆ ಸದಾ ಇರುತ್ತೇನೆ. ನೀನು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಿ. ಪ್ರತಿ ಬಾರಿಯೂ ಮತ್ತಷ್ಟು ಗಟ್ಟಿ ಆಗುತ್ತಿದ್ದಿ. ಈ ಕಷ್ಟವೂ ಕಳೆದು ಹೋಗುತ್ತದೆ. ಹಂಗಾಮ 2 ತಂಡಕ್ಕೆ ಆಲ್ ಡಿ ಬೆಸ್ಟ್” ಎಂದು ಶಮಿತಾ ಪೋಸ್ಟ್ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿಯನ್ನು ಶಮಿತಾ ಶೆಟ್ಟಿ ಬೆಂಬಲಿಸುತ್ತಿದ್ದಂತೆಯೇ ಅವರ ಪೋಸ್ಟ್ ಟ್ರೋಲ್ ಗೊಳಗಾಗಿದೆ. ಶಮಿತಾ ಶೆಟ್ಟಿ ಅವರ ಪೋಸ್ಟ್ ಗೆ ವ್ಯಕ್ತಿಯೋರ್ವ ಕಮೆಂಟ್ ಮಾಡಿದ್ದು, “ನಿಮ್ಮ ಅಕ್ಕಾ ಬೆಳಗ್ಗೆ ಯೋಗದ ಭಂಗಿಯನ್ನು ಕಲಿಸಿ ಕೊಡುತ್ತಾರೆ. ನಿಮ್ಮ ಭಾವ ರಾತ್ರಿಯ ಯೋಗದ ಭಂಗಿಯನ್ನು ಕಲಿಸಿಕೊಡುತ್ತಾರೆ”. ಎಂದು ಕಾಲೆಳೆದಿದ್ದಾರೆ.

ಇನ್ನು ಕೆಲವು ನೆಟ್ಟಿಗರು, ಅಕ್ಕಾ(ಶಿಲ್ಪಾ)-ತಂಗಿ(ಶಮಿತಾ) ಇಬ್ಬರಿಗೂ ರಾಜ್ ಕುಂದ್ರಾನ ಅವ್ಯವಹಾರಗಳು ತಿಳಿದಿದೆ. ಆದರೆ, ಇವರು ಮುದ್ಧರಂತೆ ನಟಿಸುತ್ತಿದ್ದಾರೆ. ಹಣ ಮತ್ತು ಅಧಿಕಾರದಿಂದ ಇವರು ತಮ್ಮ ಮೇಲಿನ ಆರೋಪದಿಂದ ಮುಕ್ತರಾಗುತ್ತಾರೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಬೆಚ್ಚಿ ಬೀಳಿಸಿದ ಘಟನೆ: ಬಹಿರ್ದೆಸೆಗೆ ತೆರಳಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ!

ಯುವಕನ ಲಾಕಪ್ ಡೆತ್ ವಿರೋಧಿಸಿ ಪೊಲೀಸ್ ಠಾಣೆಗೆ ನುಗ್ಗಿದ ಗ್ರಾಮಸ್ಥರು | ಮಹಿಳಾ ಪೇದೆ ಸ್ಥಳದಲ್ಲಿಯೇ ಸಾವು

121 ಅಶ್ಲೀಲ ವಿಡಿಯೋಗಳನ್ನು 12 ಲಕ್ಷ ರೂ. ಮಾರಾಟ ಮಾಡಲು ಮುಂದಾಗಿದ್ದ ರಾಜ್ ಕುಂದ್ರಾ!

ನನ್ನ ಗಂಡ ಅಮಾಯಕ, ಅವರು ಮಾಡಿದ್ದು ಸೆಕ್ಸ್ ವಿಡಿಯೋ ಅಲ್ಲ ಕಾಮ ಪ್ರಚೋದಕ ವಿಡಿಯೋ | ಶಿಲ್ಪಾ ಶೆಟ್ಟಿ

ಇತ್ತೀಚಿನ ಸುದ್ದಿ