ಪತ್ರಕರ್ತ, ಕವಿ, ಲೇಖಕ ಶಂಶೀರ್ ಬುಡೋಳಿ ಅವರಿಗೆ ‘ಕರ್ನಾಟಕ ಯುವ ರತ್ನ’ ಪ್ರಶಸ್ತಿ ಪ್ರದಾನ
ಕವಿ, ಲೇಖಕ, ನಿರೂಪಕರಾಗಿ ಗುರುತಿಸಿಕೊಂಡಿರುವ ಪತ್ರಕರ್ತ ಶಂಶೀರ್ ಬುಡೋಳಿ ಅವರಿಗೆ ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ‘ಕರ್ನಾಟಕ ಯುವ ರತ್ನ’ ಪ್ರಶಸ್ತಿಯನ್ನು ಮೂಲ್ಕಿ ಪುನರೂರು ಶ್ರೀ ವಿಶ್ವನಾಥ ದೇಗುಲದ ಆವರಣದಲ್ಲಿ ನಡೆದ 13 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ ರಾತ್ರಿ ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಆಳ್ವಾಸ್ ವಿದ್ಯಾಸಂಸ್ಥೆಯ ಸ್ಥಾಪಕ ಮೋಹನ್ ಆಳ್ವಾ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷ ಕಿನ್ನಿಗೋಳಿ ಸ್ಥಾಪಕ ಭುವನಾಭಿರಾಮ ಉಡುಪ, ಕಂಬಳ ಸಮಿತಿ ಅಧ್ಯಕ್ಷ, ಮುಂಬೈ ಉದ್ಯಮಿ ರೋಹಿತ್ ಶೆಟ್ಟಿ ಏರ್ಮಾಳ್, ಬೆಳದಿಂಗಳು ಸಾಹಿತ್ಯ ಸಮ್ಮೇಳನದ ರೂವಾರಿ ಡಾಕ್ಟರೇಟ್ ಪುರಸ್ಕೃತ ಶೇಖರ್ ಅಜೆಕಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw