ಶೇನ್ ವಾರ್ನ್ ಹಠಾತ್ ನಿಧನಕ್ಕೆ ಕಾರಣವೇನು? - Mahanayaka
2:59 AM Tuesday 10 - December 2024

ಶೇನ್ ವಾರ್ನ್ ಹಠಾತ್ ನಿಧನಕ್ಕೆ ಕಾರಣವೇನು?

shane warne
05/03/2022

ನವದೆಹಲಿ: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್(shane warne) ಅವರ ನಿಧನ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದ್ದು, ಅವರು ಯಾವ ಕಾರಣದಿಂದ ನಿಧನವಾಗಿದ್ದಾರೆ ಎನ್ನುವ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.

ಆರೋಗ್ಯವಾಗಿಯೇ ಇದ್ದ ಶೇನ್ ವಾರ್ನ್ ಏಕಾಏಕಿ ಅಸ್ವಸ್ಥರಾಗಿದ್ದು, ಈ ವೇಳೆ ಅವರಿಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. ಲವಲವಿಕೆಯಿಂದಲೇ ಇದ್ದ ಶೇನ್ ವಾರ್ನ್ ಏಕಾಏಕಿ ನಿಧನರಾಗಿರುವುದು ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದೆ.

ನಿಧನರಾಗುವುದಕ್ಕೂ ಗಂಟೆಗಳ ಮೊದಲು ಕ್ರಿಕೆಟಿಗ ರಾಡ್ ಮಾರ್ಷ್ ಸಾವಿನ ಬಗ್ಗೆ ಶೇನ್ ವಾರ್ನ್ ಟ್ವೀಟ್ ಮಾಡಿದ್ದರು. “ರಾಡ್ ಮಾರ್ಷ್ ನಿಧನರಾದ ಸುದ್ದಿ ಕೇಳಲು ದುಃಖವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದರು. ಮಾರ್ಷ್ ಆಸ್ಟ್ರೇಲಿಯಾದ ಶ್ರೇಷ್ಠ ವಿಕೆಟ್ ಕೀಪರ್ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟರು. ರಾಡ್ ಮಾರ್ಷ್ 1984 ರಲ್ಲಿ 96 ಟೆಸ್ಟ್ ಗಳನ್ನು ಆಡಿದ ನಂತರ ಸ್ಟಂಪ್ ಗಳ ಹಿಂದಿನಿಂದ 355 ಔಟ್ ಮಾಡಿದ ವಿಶ್ವದಾಖಲೆಯೊಂದಿಗೆ ನಿವೃತ್ತರಾದರು. ರಾಡ್ ಮಾರ್ಷ್ ನಿಧನರಾಗಿದ್ದಾರೆ ಎಂಬ ಸುದ್ದಿ ಕೇಳಿ ಬೇಸರವಾಯಿತು. ಅವರು ನಮ್ಮ ಶ್ರೇಷ್ಠ ಆಟದ ದಂತಕಥೆಯಾಗಿದ್ದರು ಮತ್ತು ಅನೇಕ ಯುವಕರಿಗೆ ಸ್ಫೂರ್ತಿಯಾಗಿದ್ದರು. ರಾಡ್ ಕ್ರಿಕೆಟ್ ಬಗ್ಗೆ ಆಳವಾಗಿ ಕಾಳಜಿ ವಹಿಸಿದ್ದರು. RIP ಸಂಗಾತಿ ಎಂದು ಬರೆದುಕೊಂಡಿದ್ದರು.

ಸದ್ಯ ಶೇನ್ ವಾರ್ನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಶಂಕೆ ಮಾತ್ರ ಇದ್ದು, ಅವರ ಸಾವಿಗೆ ನಿಜವಾದ ಕಾರಣ ಏನು ಎನ್ನುವುದು ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್​ ವಾರ್ನ್ ನಿಧನ

ಬಿಳಿಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿತ:10ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಶಂಕೆ

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ರಾಜ್ಯ ಬಜೆಟ್ 2022: ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂ. ಅನುದಾನ ಘೋಷಣೆ

ಆಯತಪ್ಪಿ ಐದನೆ ಮಹಡಿಯಿಂದ ಕೆಳಗೆ ಬಿದ್ದು ಅಸಿಸ್ಟೆಂಟ್ ಪ್ರೊಫೆಸರ್ ಗಂಭೀರ

ಇತ್ತೀಚಿನ ಸುದ್ದಿ