ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರಿಗೆ 89 ಸಾವಿರ ರೂ. ಪಂಗನಾಮ ಹಾಕಿದ ಸೈಬರ್ ಕಳ್ಳರು! - Mahanayaka
5:59 AM Thursday 12 - December 2024

ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರಿಗೆ 89 ಸಾವಿರ ರೂ. ಪಂಗನಾಮ ಹಾಕಿದ ಸೈಬರ್ ಕಳ್ಳರು!

shankar bidari
16/10/2021

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ, ನಿವೃತ್ತ ಡಿಜಿ, ಐಜಿಪಿ ಶಂಕರ್ ಬಿದರಿ ಅವರನ್ನೇ ಖದೀಮರು ವಂಚಿಸಿ ಸುಮಾರು 89 ಸಾವಿರ ರೂಪಾಯಿಗಳನ್ನು ಅವರ ಅಕೌಂಟ್ ನಿಂದ ಎಗರಿಸಿರುವ ಘಟನೆ ನಡೆದಿದೆ.

ನಿಮ್ಮ ಪಾನ್ ಕಾರ್ಡ್ ನಂಬರ್ ಲಿಂಕ್ ಮಾಡಬೇಕು ಎಂದು ಕರೆ ಮಾಡಿದ್ದ ವಂಚಕರು, ನೀವು ಈಗ ಪಾನ್ ಕಾರ್ಡ್ ನಂಬರ್ ನೀಡದೇ ಇದ್ದರೆ, ಬ್ಯಾಂಕ್ ಅಕೌಂಟ್ ಸ್ಥಗಿತವಾಗುತ್ತದೆ ಎಂದು ಬೆದರಿಸಿದ್ದಾರೆನ್ನಲಾಗಿದೆ. ಹಾಗೆಯೇ ಶಂಕರ್ ಬಿದರಿಯವರ ಮೊಬೈಲ್ ಗೆ ಬಂದಿರುವ ಓಟಿಪಿಯನ್ನು ಕೂಡ ಕೇಳಿದ್ದಾರೆ. ಓಟಿಪಿ ಹೇಳಿದ ಕೆಲವೇ ಕ್ಷಣಗಳಲ್ಲಿ ಶಂಕರ್ ಬಿದರಿ ಅವರ ಅಕೌಂಟ್ ನಿಂದ 89 ಸಾವಿರ ಹಣ ಕಡಿತವಾಗಿದೆ.

ಘಟನೆ ಸಂಬಂಧ ಆಗ್ನೇಯ ವಿಭಾಗ ಸಿಇಎನ್ ಠಾಣೆಗೆ ಶಂಕರ್ ಬಿದರಿ ಅವರು ದೂರು ನೀಡಿದ್ದು, ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳನ್ನೇ ವಂಚಿಸಿರುವ ಘಟನೆ ಇದೀಗ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ನಿಮ್ಮ ಮೊಬೈಲ್ ಗೆ ಬರುವ ಒಟಿಪಿ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಇತರರ ಜೊತೆಗೆ ಹಂಚಿಕೊಳ್ಳಬಾರದು. ಈ ಓಟಿಪಿ ಬಳಸಿ ನಿಮ್ಮ ಖಾತೆಗೆ ಕಳ್ಳರು ಕನ್ನ ಹಾಕಬಹುದು. ರಾಜ್ಯದಲ್ಲಿ ಬಹಳಷ್ಟು ಜನರಿಗೆ ಈ ರೀತಿಯ ವಂಚನೆಗಳಾಗುತ್ತಿವೆ. ಇಂತಹ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿದ್ದರೂ ಸಾರ್ವಜನಿಕರು ಎಚ್ಚೆತ್ತುಕೊಂಡಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

‘ಹಿಂದೂ ಹುಲಿಯ ಸಿಡಿ ಬಿಡುಗಡೆ’ ಪೋಸ್ಟ್ ಬಗ್ಗೆ ಮೌನ ಮುರಿದ ಯತ್ನಾಳ್

ಟಿಪ್ಪು ಸುಲ್ತಾನ್ ಇಲ್ಲದ ಮೈಸೂರು ದಸರಾ: ಬಿಜೆಪಿ ಸರಕಾರದ ಕೋಮುವಾದಿ ನಡೆ ಇತಿಹಾಸಕ್ಕೆ ಬಗೆದ ದ್ರೋಹ | ಪಾಪ್ಯುಲರ್ ಫ್ರಂಟ್

ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಡಿ.ಕೆ.ಶಿವಕುಮಾರ್ ಬೇನಾಮಿ ಆಸ್ತಿ: ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ

ದೇವಸ್ಥಾನದ ಆವರಣದಲ್ಲಿಯೇ ಮುಖ್ಯ ಅರ್ಚಕನನ್ನು ಗುಂಡು ಹಾರಿಸಿ ಕೊಂದ ಯುವಕರು !

ಅಮಾನವೀಯ ಘಟನೆ: ಹೊಲದಲ್ಲಿ ಗನ್ ಪಾಯಿಂಟ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ

ಸಂಘ ಪರಿವಾರದ ಓಲೈಕೆಗೆ ಸಿಎಂ ಬೊಮ್ಮಾಯಿ ಈ ಮಟ್ಟಕ್ಕೆ ಇಳಿಯಬಾರದಿತ್ತು | ಸಿದ್ದರಾಮಯ್ಯ ಆಕ್ರೋಶ

ಇತ್ತೀಚಿನ ಸುದ್ದಿ