ಶರಣ್ ಪಂಪ್ ವೆಲ್ ಗೆ ಮುಸ್ಲಿಮ್ ಸಂಸ್ಥೆಗಳ ಗುತ್ತಿಗೆಯ ಹಣ ಆಗುತ್ತದೆ, ಮುಸ್ಲಿಮರು ಆಗುವುದಿಲ್ಲ | ತರಾಟೆಗೆತ್ತಿಕೊಂಡ ಬಿರುವೆರ್ ಕುಡ್ಲ - Mahanayaka
11:10 PM Tuesday 24 - December 2024

ಶರಣ್ ಪಂಪ್ ವೆಲ್ ಗೆ ಮುಸ್ಲಿಮ್ ಸಂಸ್ಥೆಗಳ ಗುತ್ತಿಗೆಯ ಹಣ ಆಗುತ್ತದೆ, ಮುಸ್ಲಿಮರು ಆಗುವುದಿಲ್ಲ | ತರಾಟೆಗೆತ್ತಿಕೊಂಡ ಬಿರುವೆರ್ ಕುಡ್ಲ

biruver kudla
15/11/2021

ಮಂಗಳೂರು: ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ಅವರಿಗೆ ಮುಸ್ಲಿಮರ ಸಂಸ್ಥೆಗಳಲ್ಲಿ ಗುತ್ತಿಗೆ ಪಡೆದ ಹಣ ಆಗುತ್ತದೆ. ಆದರೆ, ಮುಸ್ಲಿಮ್ ಯುವಕರು ಯಾಕೆ ಆಗುವುದಿಲ್ಲ ಎಂದು ಬಿರುವೆರ್ ಕುಡ್ಲ ಸಂಘಟನೆಯ ಮುಖಂಡರು ಸುದ್ದಿಗೋಷ್ಠಿಯಲ್ಲಿ ತರಾಟೆಗೆತ್ತಿಕೊಂಡಿದ್ದಾರೆ.

ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುವೆರ್ ಕುಡ್ಲದ ಸಂಚಾಲಕ ಲಕ್ಷ್ಮೀಶ್, ಹಿಂದೆ ನಡೆದ ಸಭೆಯೊಂದರಲ್ಲಿ ಶರಣ್ ಪಂಪ್ ವೆಲ್ ಅವರು, ಬಿರುವೆರ್ ಕುಡ್ಲ ಒಂದು ಜಾತಿಗೆ ಸೀಮಿತವಾಗಿದೆ ಎಂದಿದ್ದರು. ಆದರೆ, ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಕಳೆದ 7 ವರ್ಷಗಳಲ್ಲಿ ಸಂಸ್ಥೆಯು ಬಡವರಿಗೆ ಜಾತಿ ಭೇದ ಮತ ನೋಡದೇ ಮೂರೂವರೆ ಕೋಟಿ ರೂಪಾಯಿ ಸಹಾಯ ಮಾಡಿದೆ ಎಂದರು. ಶರಣ್ ಪಂಪ್ ವೆಲ್ ಅವರು, ಬಿರುವೆರ್ ಕುಡ್ಲ ಸಂಸ್ಥೆಯ ಬಗ್ಗೆ ಮಾನಹಾನಿಕರವಾಗಿ ಮಾತನಾಡಿದ್ದಾರೆ. ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇನ್ನೂ ಬಿಡುವೆರ್ ಕುಡ್ಲ ಸಂಘಟನೆಯ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಮಾತನಾಡಿ, ಶರಣ್ ಪಂಪ್ ವೆಲ್ ಸಿಟಿ ಸೆಂಟರ್ ಸಹಿತ ಹಲವು ಮುಸ್ಲಿಮರ ಕೇಂದ್ರಗಳಿಂದ ಗುತ್ತಿಗೆ ಪಡೆದು ಆ ಸಂಸ್ಥೆಗಳಿಂದ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಆದರೆ ಅವರು ಹಿಂದುತ್ವದ ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಮುಸ್ಲಿಮ್ ಸಂಸ್ಥೆಯ ಹಣ ಆಗುತ್ತದೆ. ಮುಸ್ಲಿಮ್ ಯುವಕರು ಆಗುವುದಿಲ್ಲ, ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಿರುವೆರ್ ಕುಡ್ಲ ಸಂಸ್ಥೆಯ ಬಗ್ಗೆ ಅವರಿಗೆ ಏನಾದರೂ ಪ್ರಶ್ನೆಗಳಿದ್ದರೆ, ನಮ್ಮ ಸಂಘಟನೆಯ ಮುಖಂಡರನ್ನು ಸಂಪರ್ಕಿಸಿ ಮಾತನಾಡಬಹುದಿತ್ತಲ್ಲವೇ? ಸಾರ್ವಜನಿಕವಾಗಿ ಸಂಸ್ಥೆಯ ಬಗ್ಗೆ ಅವರು ಮಾತನಾಡಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಬಿರುವೆರ್ ಕುಡ್ಲ ನಾರಾಯಣ ಗುರುಗಳ ಮಾರ್ಗದಲ್ಲಿ ನಡೆಯುವ ಸಂಘಟನೆಯಾಗಿದೆ. ಇದರಲ್ಲಿ ಕೇವಲ ಬಿಲ್ಲವರು ಮಾತ್ರವಲ್ಲ, ಎಲ್ಲ ಜಾತಿಯ ಜನರು ಕೂಡ ಇದ್ದಾರೆ. ನಾವು ಹೆಣ ಹೊರುವುದರಿಂದ ಹಿಡಿದು ಮನೆ ಕಟ್ಟಿಸಿಕೊಡುವವರೆಗೂ ಕೆಲಸ ಮಾಡುತ್ತೇವೆ. ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಿಶೋರ್ ಬಾಬು, ವಿದ್ಯಾ, ರಾಕೇಶ್, ಉದಯ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಹಂಸಲೇಖ ವಿರುದ್ಧ ಮಾತನಾಡುತ್ತಿರುವವರು ನಿಜವಾದ ದಲಿತ ವಿರೋಧಿಗಳು!

ಪತ್ನಿಯ ಕಣ್ಣೆದುರೇ ಆರೆಸ್ಸೆಸ್ ಕಾರ್ಯಕರ್ತನನ್ನು ಕೊಚ್ಚಿ ಬರ್ಬರ ಹತ್ಯೆ!

ಕೆರೆಗೆ ತಾವರೆಗಿಡ ಹಾಕಲು ಹೋದ ವಿದ್ಯಾರ್ಥಿನಿಯ ದಾರುಣ ಸಾವು!

ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ, ತಪ್ಪು | ಕ್ಷಮೆಯಾಚಿಸಿದ ಹಂಸಲೇಖ

ಎಚ್ಚರ…! ನೀವು ನಿದ್ದೆ ಕೆಡುತ್ತಿದ್ದೀರಾ? | ಹಾಗಿದ್ದರೆ ಈ ವಿಚಾರವನ್ನು ತಿಳಿದುಕೊಳ್ಳಲೇ ಬೇಕು!

ದೇವರ ಪ್ರಸಾದ ಸೇವಿಸಿ ವಾಂತಿ ಭೇದಿ | 25ರಿಂದ 30 ಭಕ್ತರು ಅಸ್ವಸ್ಥ

ಇತ್ತೀಚಿನ ಸುದ್ದಿ