“ಶಾಸಕರಾಗಿ ಕೊವಿಡ್ ಸೆಂಟರ್ ನಲ್ಲಿ ರೇಣುಕಾಚಾರ್ಯ ಈ ರೀತಿ ಮಾಡಬಾರದಿತ್ತು” | ದೂರು ದಾಖಲು
18/06/2021
ದಾವಣಗೆರೆ: ಪದೇ ಪದೇ ವಿವಾದಗಳಿಗೆ ಕಾರಣವಾಗುತ್ತಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಇದೀಗ ಕೊವಿಡ್ ಸಂದರ್ಭದಲ್ಲಿ ವಿಪರೀತ ಪ್ರಚಾರ ಪಡೆಯಲು ಹೋಗಿ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊವಿಡ್ ರೋಗಿಗಳ ಜೊತೆಗೆ ಡಾನ್ಸ್ ಮಾಡುವುದು, ಪದೇ ಪದೇ ಆಂಬುಲೆನ್ಸ್ ಚಲಾಯಿಸುವುದು, ಅನಗತ್ಯವಾಗಿ ಕೊವಿಡ್ ಸೆಂಟರ್ ನಲ್ಲಿ ವಾಸ್ತವ್ಯ ಹೂಡುವುದು ಇಷ್ಟು ಸಾಲದು ಎಂಬಂತೆ ಹೋಮ ಮಾಡಿ, “ತಾಕತ್ ಇದ್ದರೆ ಕೇಸ್ ಮಾಡಿ” ಎಂದು ಸವಾಲು ಹಾಕಿರುವುದು ಇವೇ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ವಿರೋಧಿ ವೇದಿಕೆಯಿಂದ ಹೊನ್ನಾಳಿ ರೇಣುಕಾಚಾರ್ಯ ವಿರುದ್ಧ ದೂರು ನೀಡಲಾಗಿದೆ ಎಂದು ವರದಿಯಾಗಿದೆ.
ಕೊವಿಡ್ ಸೆಂಟರ್ ನಲ್ಲಿ ಅನಗತ್ಯವಾಗಿ ವಾಸ್ತವ್ಯ ಹೂಡಿರುವುದಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ವಿರೋಧಿ ವೇದಿಕೆಯು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ ಪಿ ಸಿಬಿ ರಿಷ್ಯಂತ್ ಅವರಿಗೆ ದೂರು ನೀಡಲಾಗಿದೆ.