ಶಶಿಕಲಾ ತಮಿಳುನಾಡಿಗೆ ಕಾಲಿಡುತ್ತಿದ್ದಂತೆಯೇ ಎರಡು ಕಾರುಗಳಿಗೆ ಬೆಂಕಿ | ಅಷ್ಟಕ್ಕೂ ನಡೆದದ್ದೇನು? - Mahanayaka
6:18 AM Thursday 6 - February 2025

ಶಶಿಕಲಾ ತಮಿಳುನಾಡಿಗೆ ಕಾಲಿಡುತ್ತಿದ್ದಂತೆಯೇ ಎರಡು ಕಾರುಗಳಿಗೆ ಬೆಂಕಿ | ಅಷ್ಟಕ್ಕೂ ನಡೆದದ್ದೇನು?

08/02/2021

ಚೆನ್ನೈ: ನಾಲ್ಕು ವರ್ಷದ  ಜೈಲು ವಾಸದ ಬಳಿಕ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ನಟರಾಜನ್ ಅವರು ಇಂದು ತಮಿಳುನಾಡಿಗೆ ಕಾಲಿಡಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಬಲಿಗರು ಶಶಿಕಲಾ ಅವರನ್ನು ಬರ ಮಾಡಿಕೊಳ್ಳಲು ಕಾಯುತ್ತಿದ್ದ ವೇಳೆ ಎರಡು ಕಾರುಗಳಿಗೆ ಬೆಂಕಿ ಹತ್ತಿಕೊಂಡಿರುಬವ ಘಟನೆ ನಡೆದಿದೆ.

ಇಲ್ಲಿನ ಕೃಷ್ಣಗಿರಿ ಟೋಲ್ ಬಳಿಯಲ್ಲಿ ಎರಡು ಕಾರುಗಳಿಗೆ ಬೆಂಕಿ ಹತ್ತಿಕೊಂಡಿದೆ. ಶಶಿಕಲಾ ಅವರನ್ನು ಬರ ಮಾಡಿಕೊಳ್ಳಲು ಬೆಂಬಲಿಕರು ಕಾಯುತ್ತಿರುವಾಗಲೇ ಏಕಾಏಕಿ ಕಾರುಗಳಿಗೆ ಬೆಂಕಿ ಹತ್ತಿಕೊಂಡಿದೆ.

ಶಶಿಕಲಾ ಅವರ ಬರುವ ವೇಳೆ ಪಟಾಕಿ ಹಚ್ಚಲು ಬೆಂಬಲಿಗರು ಕಾರಿನಲ್ಲಿ ಪಟಾಕಿ ಇಟ್ಟಿದ್ದು, ಇದಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಕಾರಿನಲ್ಲಿ ಪಟಾಕಿ ಸಿಡಿದೆ ಎಂದು ಹೇಳಲಾಗಿದೆ. ಆದರೆ ಇದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಲಾಗಿದೆ. ಘಟನೆಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ