ಶವಾಗಾರದ ಫ್ರೀಜರ್ ನಿಂದ ಹೊರ ತೆಗೆದಾಗ ಸತ್ತ ವ್ಯಕ್ತಿ ಜೀವಂತ! - Mahanayaka
8:41 AM Saturday 21 - September 2024

ಶವಾಗಾರದ ಫ್ರೀಜರ್ ನಿಂದ ಹೊರ ತೆಗೆದಾಗ ಸತ್ತ ವ್ಯಕ್ತಿ ಜೀವಂತ!

moradabad
22/11/2021

ಮೊರಾದಾಬಾದ್: ಉತ್ತರ ಪ್ರದೇಶದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದ ವ್ಯಕ್ತಿಯನ್ನು ಶವಾಗಾರದ ಫ್ರೀಜರ್ ನಲ್ಲಿ 7 ಗಂಟೆಗಳ ಕಾಲ ಇರಿಸಲಾಗಿದ್ದು, ಆ ಬಳಿಕ ಪೋಸ್ಟ್ ಮಾರ್ಟಂಗಾಗಿ ಕೊಂಡೊಯ್ಯುತ್ತಿರುವ ವೇಳೆ ವ್ಯಕ್ತಿ ಜೀವಂತವಾಗಿರುವುದು ಬೆಳಕಿಗೆ ಬಂದಿದೆ.

ಗುರುವಾರ ರಾತ್ರಿ ಅಪಘಾತದಲ್ಲಿ ಗಾಯಗೊಂಡಿದ್ದ 40 ವರ್ಷ ವಯಸ್ಸಿನ ಎಲೆಕ್ಟ್ರಿಷಿಯನ್ ಶ್ರೀಕೇಶ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಹೃದಯ ಬಡಿತ ಇಲ್ಲದ ಹಿನ್ನೆಲೆಯಲ್ಲಿ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆನ್ನಲಾಗಿದೆ. ಆ ಬಳಿಕ ಅವರನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದ ಫ್ರಿಜರ್ ನಲ್ಲಿ ಇರಿಸಲಾಗಿತ್ತು.

ಸುಮಾರು 7 ಗಂಟೆಗಳ ಬಳಿಕ ಶವ ಪರೀಕ್ಷೆಗೆ ಕುಟುಂಬಸ್ಥರ ಒಪ್ಪಿಗೆ ಪಡೆದು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದ ವೇಳೆ ಕುಮಾರ್ ಅವರ ಕೈ ಕಾಲುಗಳು ಚಲನೆಯಲ್ಲಿರುವುದು ಕಂಡು ಅವರು ಸತ್ತಿಲ್ಲ, ಉಸಿರಾಡುತ್ತಿದ್ದಾರೆ ಎಂದು ಸಂಬಂಧಿಕರು ಜೋರಾಗಿ ಬೊಬ್ಬಿಟ್ಟಿದ್ದಾರೆ.


Provided by

ಇದೀಗ ಕುಮಾರ್ ಅವರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಇದೊಂದು ಬಹಳ ಅಪರೂಪದ ಪ್ರಕರಣವಾಗಿದ್ದು, ಇದು ವೈದ್ಯರ ನಿರ್ಲಕ್ಷ್ಯವಲ್ಲ. ಅವರ ಹೃದಯ ಬಡಿತವನ್ನು ಹಲವು ಬಾರಿ ಪರೀಕ್ಷಿಸಿದಾಗಲೂ ಹೃದಯ ಬಡಿತ ಇರಲಿಲ್ಲ. ಇದೀಗ ಅವರನ್ನು ರಕ್ಷಿಸುವ ಆದ್ಯತೆ ನಮ್ಮದಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಶಿವಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೋನಿಯಾ ಗಾಂಧಿ ಎದುರು ಕೈಕಟ್ಟಿ ಕುಳಿತುಕೊಂಡಾಗ ಎಲ್ಲಿ ಹೋಗಿತ್ತು ಕರ್ತವ್ಯ ನಿಷ್ಠೆ? | ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಮೋದಿಜಿ ಬಾಲಿವುಡ್ ನಲ್ಲಿರುತ್ತಿದ್ದರೆ, ಎಲ್ಲ ಪ್ರಶಸ್ತಿ ಅವರೇ ಗೆಲ್ಲುತ್ತಿದ್ದರು | ಅಸಾದುದ್ದೀನ್ ಓವೈಸಿ ವ್ಯಂಗ್ಯ

ತಾಕತ್ ಇದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿಸಿ ಹೊಡೆಯಿರಿ: ಸುಲಫಲ ಮಠದ ಸ್ವಾಮೀಜಿಗೆ ಸಿದ್ದಲಿಂಗ ಸ್ವಾಮೀಜಿ ತಿರುಗೇಟು

ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸುತ್ತಲೇ ನೀರುಪಾಲಾದ ಪೊಲೀಸ್ ಅಧಿಕಾರಿ ಸಾವು

ದೈಹಿಕ ಸಂಬಂಧ ಬೆಳೆಸಿದ ಬಳಿಕ ಜಾತಕ ಸರಿ ಹೊಂದುವುದಿಲ್ಲ ಎಂದು ಮದುವೆಗೆ ನಿರಾಕರಣೆ: ಯುವಕನ ವಿರುದ್ಧ ದೂರು

 

ಇತ್ತೀಚಿನ ಸುದ್ದಿ