ಅಂತ್ಯಕ್ರಿಯೆಗೆ ಕೆಲವೇ ನಿಮಿಷ ಇರುವಾಗ ಶವಪೆಟ್ಟಿಗೆಯೊಳಗಿನಿಂದ ಕೇಳಿತು ಬಡಿಯುವ ಶಬ್ದ!

ಅಮೆರಿಕ: ಮಹಿಳೆಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ಅಂತ್ಯಸಂಸ್ಕಾರಕ್ಕೆ ಶವಪೆಟ್ಟಿಗೆ ಹೊತ್ತು ಹೋಗುತ್ತಿದ್ದ ವೇಳೆ, ಏಕಾಏಕಿ ಶವಪೆಟ್ಟಿಗೆಯೊಳಗಿನಿಂದ ಬಡಿಯುವ ಶಬ್ದ ಕೇಳಿ ಬಂದಿದ್ದು, ಸಂಬಂಧಿಕರು ಬೆಚ್ಚಿ ಬಿದ್ದಿದ್ದಾರೆ.
ಹೌದು..! ಅಮೆರಿಕದ ಪೆರುವಿಯಾದ ಲಾಂಬೋಕ್ ನಗರದಲ್ಲಿ ಕಳೆದ ವಾರ ಈ ಘಟನೆ ನಡೆದಿದ್ದು, ರೋಸಾ ಇಸಾಬೆಲ್ ಸೆಸ್ಪೆಡೆಸ್ ಕ್ಯಾಲಸಾ ಎಂಬ ಮಹಿಳೆ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಪತಿ ಮೃತಪಟ್ಟಿದ್ದರು. ರೋಸಾ ಇಸಾಬೆಲ್ ಸೆಸ್ಪೆಡೆಸ್ ಕ್ಯಾಲಸಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಬಳಿಕ ವೈದ್ಯರು ಇಸಾಬೆಲ್ ನಿಧನರಾಗಿದ್ದಾರೆ ಎಂದು ಘೋಷಿಸಿದ್ದಾರೆ.
ರೋಸಾ ಇಸಾಬೆಲ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದ ಬೆನ್ನಲ್ಲೇ ಸಂಬಂಧಿಕರು ರೋಸಾಳನ್ನು ಸಮಾಧಿ ಮಾಡಲು ಸಿದ್ಧತೆ ನಡೆಸಿದ್ದರು. ಕಳೆದ ಮಂಗಳವಾರದ ಅಂತ್ಯಕ್ರಿಯೆಯ ಮುನ್ನ ರೋಸಾಳನ್ನು ಶವಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಆದರೆ ಅವಳು ಶವಪೆಟ್ಟಿಗೆಯ ಒಳಗಿನಿಂದ ಬಡಿಯುವ ಸದ್ದು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ತಕ್ಷಣವೇ ಶವಪೆಟ್ಟಿಗೆಯನ್ನು ಹಿಡಿದವರು ಅದನ್ನು ಕೆಳಕ್ಕೆ ಇಳಿಸಿ ನೋಡಿದಾಗ ರೋಸಾ ಅವರು ಕಣ್ಣು ತೆರೆದಿದ್ದು ಮೈಯೆಲ್ಲಾ ಬೆವತಿದ್ದಳು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಕುಟುಂಬಸ್ಥರು ರೋಸಾಳನ್ನು ಆಸ್ಪತ್ರೆಗೆ ಕರೆದೊಯ್ದರು. ಜೀವರಕ್ಷಕ ನೆರವಿನಿಂದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಕೆಲವು ಗಂಟೆಗಳ ನಂತರ ಅವರು ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೊನೆಗೂ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್
ಪತಿವ್ರತೆ ಎಂದು ಸಾಬೀತುಪಡಿಸಲು ಪತ್ನಿಯ ಕೈ ಸುಟ್ಟ ಪತಿ!
ಶಾವರ್ಮಾದಲ್ಲಿ ಬಳಸುವ ಮಯೋನೆಸ್ ಎಷ್ಟು ಅಪಾಯಕಾರಿ?
ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿಯ ತಲೆಗೆ ಬಿದ್ದ ಸೀಲಿಂಗ್ ಫ್ಯಾನ್!