ಪವಿತ್ರಾ ಮುಗ್ದೆ,  ಆಕೆ ಯಾವ ತಪ್ಪೂ ಮಾಡಿಲ್ಲ:  ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯೆ - Mahanayaka

ಪವಿತ್ರಾ ಮುಗ್ದೆ,  ಆಕೆ ಯಾವ ತಪ್ಪೂ ಮಾಡಿಲ್ಲ:  ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯೆ

pavithra gowda
17/12/2024

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎ1 ಆರೋಪಿ ಪವಿತ್ರಾ ಗೌಡ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಪವಿತ್ರಾ ಗೌಡ ಕೇಸ್ ಗೆ ಸಂಬಂಧಿಸಿದಂತೆ ಅವರ ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಪವಿತ್ರಾಗೆ ಜಾಮೀನು ಸಿಕ್ಕಿರುವುದು ಖುಷಿಯಾಗುತ್ತಿದೆ. ಈ ಕೇಸ್ ಮುಗಿದು ಹೋಗಿದ್ದರೆ ಸಾಕು ಅನಿಸುತ್ತಿದೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ ಅಂತ ಮೊದಲೂ ಹೇಳಿದ್ದೆ, ಈಗಲೂ ಹೇಳುತ್ತೇನೆ. ಪವಿತ್ರಾ ಮುಗ್ದೆ. ಆಕೆ ಯಾವ ತಪ್ಪೂ ಮಾಡಿಲ್ಲ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಇನ್ನು ಮುಂದೆಯೂ ದರ್ಶನ್ ಜೊತೆ ಪವಿತ್ರಾ ಚೆನ್ನಾಗಿರುತ್ತಾಳೆ ಅಂದರೆ ಇರಲಿ. ಆಕೆ ಸ್ಟ್ರಾಂಗ್ ಲೇಡಿ, ಈ ಪ್ರಕರಣದಲ್ಲಿ ಪವಿತ್ರಾಳ ತಪ್ಪಿಲ್ಲ. ಆಕೆಗೆ ಕೆಟ್ಟ ಮೆಸೆಜ್ ಬಂದಾಗ ಯಾರಿಗೆ ಹೇಳಬೇಕೋ ಅವರಿಗೆ ಹೇಳಿದ್ದಾಳೆ. ಇದರಲ್ಲಿ ಆಕೆಯದ್ದೇನೂ ತಪ್ಪಿಲ್ಲ ಎಂದು ಸಂಜಯ್ ಹೇಳಿದ್ದಾರೆ.

ದರ್ಶನ್ ಆಸ್ಪತ್ರೆಯಲ್ಲಿದ್ದಾರೆ ಅಂತ ಗೊತ್ತಾಯ್ತು ಅವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ