ಶೀಘ್ರದಲ್ಲೇ ಮದುವೆಯಾಗ್ತಾರಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟಿ ಕಂಗನಾ!
ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ನಟಿ ಕಂಗನಾ ಅವರು, ಶೀಘ್ರದಲ್ಲೇ ಮದುವೆಯಾಗುವುದರ ಬಗ್ಗೆ ಆಲೋಚನೆ ನಡೆಸುತ್ತಿದ್ದಾರಂತೆ. ಚಿತ್ರಗಳ ಭರಾಟೆಯಿಂದ ಹೊರ ಬಂದಿದ್ದ ಕಂಗನಾ ಅವರು ಬಿಜೆಪಿ ಸಿದ್ಧಾಂತದ ಪರವಾಗಿ ಇತ್ತೀಚೆಗೆ ಹಲವು ಹೇಳಿಕೆಗಳ ಮೂಲಕ ಸುದ್ದಿಯಲ್ಲಿದ್ದರು.
ಪದ್ಮಶ್ರೀ ಪ್ರಶಸ್ತಿ ಮುಡಿದುಕೊಂಡ ಕಂಗನಾ ಇದೀಗ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಟೈಮ್ಸ್ ನೌ ಗೆ ನೀಡಿದ ಸಂದರ್ಶನದಲ್ಲಿ ಅವರು, ನನ್ನ ಬಾಳ ಸಂಗಾತಿಯ ಬಗ್ಗೆ ಶೀಘ್ರವೇ ನಿಮಗೆ ತಿಳಿಯಲಿದೆ ಎಂದು ಹೇಳಿದ್ದು, ಈ ಮೂಲಕ ತಮ್ಮ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹತ್ತಿಸಿದ್ದಾರೆ.
ಕಂಗನಾ ಅವರ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಈ ಉತ್ತರವನ್ನು ಅವರು ನೀಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಮದುವೆಯಾಗಿ ಮಕ್ಕಳನ್ನು ಹೊಂದಲು ಬಯಸುತ್ತೇನೆ. ವೈಯಕ್ತಿಕವಾಗಿ ಈಗ ನಾನು ಸಂತೋಷದಿಂದಿದ್ದೇನೆ. ಬಾಳ ಸಂಗಾತಿಯ ಬಗೆಗಿನ ವಿವರಗಳನ್ನು ಶೀಘ್ರದಲ್ಲಿಯೇ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಖಂಡಿತವಾಗಿಯೂ ನಾನು ಮದುವೆಯಾಗುತ್ತೇನೆ, ಮಕ್ಕಳನ್ನೂ ಹೊಂದುತ್ತೇನೆ. ನಾನು ಐದು ವರ್ಷಗಳ ನಂತರ ತಾಯಿಯಾಗಿ ಹೆಂಡತಿಯಾಗಿ ಜೀವನ ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG