ಮಹಿಳೆಯನ್ನು ಇರಿದು ಕೊಂದ ಕುರಿಗೆ ಮೂರು ವರ್ಷಗಳ ಜೈಲು ಶಿಕ್ಷೆ!
ಸುಡಾನ್: ಮೊದಲಿಗೆ ಇದು ತಮಾಷೆ ಎಂದು ಅನಿಸಿದರೂ ಸುಡಾನ್ ನ ನ್ಯಾಯಾಲಯವು ಮೇಕೆಗೆ ಕೊಲೆ ಆರೋಪದಡಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಮಹಿಳೆಯನ್ನು ಇರಿದು ಕೊಂದಿದ್ದಕ್ಕಾಗಿ ಪ್ರಾಣಿಗೆ ಈ ರೀತಿಯ ಶಿಕ್ಷೆ ವಿಧಿಸಲಾಗಿದೆ. ದಕ್ಷಿಣ ಸುಡಾನ್ ಮೂಲದ ಆದಿಯು ಚಾಪಿಂಗ್ (45) ಮೇಕೆ ದಾಳಿಯಲ್ಲಿ ಸಾವನ್ನಪ್ಪಿದ ಮಹಿಳೆ. ಚಾಪಿಂಗ್ ನ ತಲೆಗೆ ಕುರಿ ಇರಿದಿದ್ದು, ಪಕ್ಕೆಲುಬು ಮುರಿತಕ್ಕೊಳಗಾದ ಮಹಿಳೆ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದರು.
ಘಟನೆ ಬಳಿಕ ಪೊಲೀಸರು ಮೇಕೆಯನ್ನು ವಶಕ್ಕೆ ಪಡೆದಿದ್ದಾರೆ. ಮಾಲೀಕರು ನಿರಪರಾಧಿಯಾಗಿದ್ದು, ಅಪರಾಧವನ್ನು ಕುರಿ ಎಸಗಿದೆ ಮತ್ತು ಆದ್ದರಿಂದ ಮೇಕೆಯನ್ನು ಬಂಧಿಸಲು ಅರ್ಹವಾಗಿದೆ ಎಂದು ಮೇಜರ್ ಎಲಿಜಾ ಮಾಬೋರ್ ಹೇಳಿದ್ದಾರೆ.
ಸದ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕುರಿ ಬಂಧನದಲ್ಲಿದೆ. ಮುಂದಿನ ಮೂರು ವರ್ಷಗಳನ್ನು ಸುಡಾನ್ ನ ಲೇಕ್ಸ್ ಸ್ಟೇಟ್‌ನಲ್ಲಿರುವ ಅಡ್ಯುಯೆಲ್ ಕೌಂಟಿಯ ಪ್ರಧಾನ ಕಚೇರಿಯಲ್ಲಿ ಮಿಲಿಟರಿ ಶಿಬಿರದಲ್ಲಿ ಮುಂದಿನ ದಿನಗಳು ಕಳೆಯಬೇಕಾಗುತ್ತದೆ.
ಕುರಿಯ ಮಾಲೀಕರು ಮತ್ತು ಮೃತ ಯುವತಿಯ ಕುಟುಂಬ, ಸಂಬಂಧಿಕರಾಗಿದ್ದು, ನೆರೆಹೊರೆಯವರಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಮೇಕೆಯನ್ನು ಸ್ಥಳೀಯ ಕಾನೂನಿನ ಪ್ರಕಾರ ಕುಟುಂಬಕ್ಕೆ ಉಡುಗೊರೆಯಾಗಿ ನೀಡಲಾಗಬೇಕಿದೆ. ಇದಲ್ಲದೆ, ಐದು ಹಸುಗಳನ್ನು ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರವಾಗಿ ಹಸ್ತಾಂತರಿಸಬೇಕೆಂದು ಕೋರ್ಟ್ ತೀರ್ಪು ನೀಡಿದೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ: 11 ನವಜಾತ ಶಿಶುಗಳು ಸಜೀವ ದಹನ
ಮಸೀದಿಯಲ್ಲಿ ದೈವ ಸಾನಿಧ್ಯ ಇತ್ತು: ತಾಂಬೂಲ ಪ್ರಶ್ನೆಯಲ್ಲಿ ಜ್ಯೋತಿಷ್ಯ ಗೋಪಾಲಕೃಷ್ಣ ಪಣಿಕ್ಕರ್
ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಟೈರ್ ಸ್ಫೋಟ