1 ತಲೆ, 8 ಕಾಲು, 2 ದೇಹ: ವಿಚಿತ್ರ ಮರಿಗೆ ಜನ್ಮ ನೀಡಿದ ಕುರಿ!
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನಲ್ಲಿ ವಿಚಿತ್ರ ಕುರಿಮರಿಯೊಂದರ ಜನನವಾಗಿದ್ದು, 1 ತಲೆ, 8 ಕಾಲು, 2 ದೇಹ ಹೊಂದಿರುವ ಕುರಿ ಮರಿ ಅಚ್ಚರಿಯನ್ನುಂಟು ಮಾಡಿದೆ.
ಕಡೂರು ತಾಲೂಕಿನ ಕೇದಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜನನವಾದ ಕುರಿಮರಿಯ ಒಂದು ದೇಹಕ್ಕೆ ತಲೆಯೇ ಇಲ್ಲ, ಒಂದು ದೇಹ ಮತ್ತೊಂದು ದೇಹದ ಜೊತೆ ಸೇರ್ಪಡೆಗೊಂಡಿದೆ.
ಕೇದಿಗೆರೆ ಗ್ರಾಮದ ಈಶಣ್ಣ ಎಂಬುವರ ಮನೆಯಲ್ಲಿ 30 ಕುರಿಗಳನ್ನು ಸಾಕುತ್ತಿದ್ದಾರೆ. ಈ ಪೈಕಿ ಒಂದು ಕುರಿ ವಿಚಿತ್ರ ಮರಿಗೆ ಜನ್ಮ ನೀಡಿದೆ. ಈ ವಿಚಿತ್ರ ಜನನವಾಗಿ ಒಂದು ಗಂಟೆಯವರೆಗೆ ಕುರಿ ಮರಿ ಜೀವಂತವಿತ್ತು, ಆ ಬಳಿಕ ಸಾವನ್ನಪ್ಪಿದೆ.
ಈ ವಿಚಿತ್ರ ಮರಿಯನ್ನು ನೋಡಲು ಜನರು ಅಕ್ಕ ಪಕ್ಕದ ಹಳ್ಳಿಗಳಿಂದ ಆಗಮಿಸಿದ್ದರು. ಜನರು ಈ ಮರಿಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಚಿತ್ರ ಕುರಿಮರಿ ನೋಡಲು ಭಯ ಹುಟ್ಟಿಸುವಂತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw