20 ವರ್ಷಗಳ ಸರ್ವಾಧಿಕಾರ ಆಡಳಿತ ಅಂತ್ಯ: ಪ್ರಧಾನಿ ಹುದ್ದೆಗೆ ಶೇಖ್ ಹಸೀನ್ ರಾಜೀನಾಮೆ; ಮೋದಿ ಆಸರೆ..?
ಕಳೆದ 20 ವರ್ಷಗಳಿಂದ ಸರ್ವಾಧಿಕಾರಿಯಂತೆ ಅಧಿಕಾರ ನಡೆಸಿದ್ದ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಕ್ ಹಸೀನಾ ಅವರು ರಾಜೀನಾಮೆ ನೀಡಿದ್ದಾರೆ. ಮತ್ತು ಸೇನಾ ಹೆಲಿಕಾಪ್ಟರ್ ನಲ್ಲಿ ಭಾರತಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ 1971ರಲ್ಲಿ ಬಾಂಗ್ಲಾದ ಸ್ವಾತಂತ್ರ್ಯಕ್ಕಾಗಿ ನೇತೃತ್ವ ನೀಡಿದ್ದ ಶೇಕ್ ಮುಜೀಬ್ ರೆಹಮಾನ್ ಅವರ ಮಗಳೇ ಈ ಶೇಕ್ ಹಸೀನಾ.
ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ಪಾರ್ಲಿಮೆಂಟ್ ಚುನಾವಣೆ ನಡೆದಿತ್ತು. ಆದರೆ ಈ ಚುನಾವಣೆಗಿಂತ ಮೊದಲು ಶೇಕ್ ಹಸೀನಾ ಅವರು ವಿರೋಧ ಪಕ್ಷಗಳನ್ನು ದಮನಿಸುವ ಕೆಲಸ ಮಾಡಿದರು. ನಾಯಕರನ್ನು ಜೈಲಿಗೆಟ್ಟಿದರು. ಜಮಾಅತೆ ಇಸ್ಲಾಮಿಯ ಕೆಲವು ನಾಯಕರನ್ನು ಗಲ್ಲಿಗೇರಿಸಿದರು. ಮಾತ್ರ ಅಲ್ಲ ರಾಜಕೀಯ ಪಕ್ಷವಾಗಿದ್ದ ಮತ್ತು ಖಲೀದ ಜಿಯಾ ಅವರ ಕಾಲದಲ್ಲಿ ಆಡಳಿತ ಪಕ್ಷದ ಭಾಗವಾಗಿದ್ದ ಜಮಾಅತೆ ಇಸ್ಲಾಮಿಯನ್ನು ನಿಷೇಧಿಸಿದರು. ಅಕ್ಷರಶ ಸರ್ವಾಧಿಕಾರಿಯಂತೆ ಆಡಳಿತ ನಡೆಸಿದ ಅವರು ತನ್ನ ವಿರುದ್ಧ ಧ್ವನಿಯೆತ್ತಿದವರನ್ನೆಲ್ಲಾ ಮಣಿಸಿದರು.
ಇದೀಗ ಮೀಸಲಾತಿ ವಿರುದ್ಧ ವಿದ್ಯಾರ್ಥಿಗಳು ಆರಂಭಿಸಿದ ಪ್ರತಿಭಟನೆ ದೇಶಾದ್ಯಂತ ಹಸೀನಾ ವಿರುದ್ಧ ಪ್ರತಿಭಟನೆಯಾಗಿ ಮಾರ್ಪಟ್ಟಿತ್ತಲ್ಲದೆ 300 ಕಿಂತಲೂ ಅಧಿಕ ಜೀವಹನಿಗೆ ಕಾರಣವಾಯಿತು. ಈ ನಡುವೆ ಸೇನೆ ಮಧ್ಯಪ್ರವೇಶಿಸುವ ಸೂಚನೆಯನ್ನು ನೀಡಿತು.. ಬಳಿಕ ಹಸೀನಾ ಸೇನೆಯೊಂದಿಗೆ ಮಾಡಿಕೊಂಡ ಒಪ್ಪಂದದಂತೆ ರಾಜೀನಾಮೆ ಕೊಟ್ಟು ಭಾರತಕ್ಕೆ ಬಂದು ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth