ಅಬುದಾಬಿಯಲ್ಲಿ ನಿರ್ಮಾಣವಾಗ್ತಿದೆ ದೇವಸ್ಥಾನ: ಇದು ಪಶ್ಚಿಮ ಏಷ್ಯಾದಲ್ಲಿಯೇ ಅತಿ ದೊಡ್ಡ ಹಿಂದೂ ಮಂದಿರ..! - Mahanayaka
9:12 PM Friday 20 - September 2024

ಅಬುದಾಬಿಯಲ್ಲಿ ನಿರ್ಮಾಣವಾಗ್ತಿದೆ ದೇವಸ್ಥಾನ: ಇದು ಪಶ್ಚಿಮ ಏಷ್ಯಾದಲ್ಲಿಯೇ ಅತಿ ದೊಡ್ಡ ಹಿಂದೂ ಮಂದಿರ..!

11/07/2023

ಪಶ್ಚಿಮ ಏಷ್ಯಾದಲ್ಲಿಯೇ ಅತಿ ದೊಡ್ಡ ಹಿಂದೂ ಮಂದಿರವು ಅಬುದಾಬಿಯಲ್ಲಿ ನಿರ್ಮಾಣವಾಗುತ್ತಿದೆ. ಇದು ಮುಂದಿನ ವರ್ಷದ ಫೆಬ್ರವರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಇದರ ಕೆತ್ತನೆ ಇತ್ಯಾದಿ ಕಾರ್ಯವು ಅಬುದಾಬಿ ಮತ್ತು ಭಾರತದಲ್ಲಿ ನಡೆಯುತ್ತಿದೆ.

ಈ ಹಿಂದೂ ಮಂದಿರದ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಲು ಯುಎಇ ಸಚಿವ ಶೇಕ್ ನಹಿಯಾನ್ ಮುಬಾರಕ್ ಅಲ್ ನಹಿಯಾನ್ ಮಂದಿರಕ್ಕೆ ಆಗಮಿಸಿದ್ದರು. ಹಾಗೆಯೇ ಉದ್ಘಾಟನೆಗೆ ಸಂಬಂಧಿಸಿ ಪ್ರಧಾನ ಅರ್ಚಕರೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ.

ಅಬು ಮುರೈಕಾದ 27 ಎಕರೆ ಪ್ರದೇಶದಲ್ಲಿ ಪಾರಂಪರಿಕ ರೀತಿಯಲ್ಲಿ ಈ ಮಂದಿರ ನಿರ್ಮಾಣವಾಗುತ್ತಿದೆ. ಈ ಮಂದಿರ ನಿರ್ಮಾಣಕ್ಕಾಗಿ ಭೂಮಿಯನ್ನು ನೀಡಿದ ಯುಎಇ ಸರ್ಕಾರಕ್ಕೆ ಸ್ವಾಮಿ ಬ್ರಹ್ಮ ವಿಹಾರಿ ದಾಸ್ ಕೃತಜ್ಞತೆ ಸಲ್ಲಿಸಿದ್ದಾರೆ.


Provided by

ಯುಎಇ ಯ 7 ರಾಜ್ಯಗಳ ಸಂಕೇತವಾಗಿ ಈ ಮಂದಿರದಲ್ಲಿ 7 ಗೋಪುರಗಳಿರುತ್ತವೆ. ಇದರ ಕಂಬಗಳು ಮತ್ತು ವಿಗ್ರಹಗಳು ಭಾರತದಲ್ಲಿ ನಿರ್ಮಾಣವಾಗುತ್ತಿದ್ದು ಇದನ್ನು ಅಬುದಾಬಿಗೆ ತರಲಾಗುತ್ತಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ