ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಶೇಖರ್ ಲಾಯಿಲ ಅವರಿಗೆ ಪಿತೃವಿಯೋಗ
ಬೆಳ್ತಂಗಡಿ: ಸಿಪಿಐಎಂ ಪಕ್ಷದ ಹಿರಿಯ ಸದಸ್ಯ, ದಲಿತ ಹಕ್ಕುಗಳ ಹೋರಾಟ ಸಮಿತಿ ಸಹಿತ ಚಳವಳಿಗಳಲ್ಲಿ ತೊಡಗಿಸಿಕೊಂಡಿರುವ ಶೇಖರ್ ಲಾಯಿಲ ಅವರಿಗೆ ಪಿತೃವಿಯೋಗವಾಗಿದೆ.
ಶೇಖರ್ ಅವರ ತಂದೆ ಲಾಯಿಲ ಗ್ರಾಮದ ಲಾಯಿಲ ಬೈಲು ನಿವಾಸಿ ಇನಾಸ (80) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೃಷಿ ಕೂಲಿ ಕಾರ್ಮಿಕರಾಗಿದ್ದ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಮೃತರು ಪತ್ನಿ ವೆಂಕಮ್ಮ, ಗಂಡುಮಕ್ಕಳಾದ ಶೇಖರ್ ಲಾಯಿಲ, ಉತ್ಸಾಹಿ ಯುವಕ ಮಂಡಲದ ಕಾರ್ಯದರ್ಶಿ ಎಲ್ ಹರೀಶ್ ಕುಮಾರ್, ಏಕೈಕ ಪುತ್ರಿ ಜಯಂತಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw