ಶೇಂದಿ ತೆಗೆಯುತ್ತಿದ್ದಾಗ ತಾಳೆ ಮರದಿಂದ ಬಿದ್ದು ವ್ಯಕ್ತಿ ಸಾವು - Mahanayaka
12:13 AM Tuesday 4 - February 2025

ಶೇಂದಿ ತೆಗೆಯುತ್ತಿದ್ದಾಗ ತಾಳೆ ಮರದಿಂದ ಬಿದ್ದು ವ್ಯಕ್ತಿ ಸಾವು

bantwal
28/01/2022

ಬಂಟ್ವಾಳ: ಶೇಂದಿ ತೆಗೆಯುತ್ತಿದ್ದ ವೇಳೆ ತಾಳೆ ಮರದಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನರಿಕೊಂಬು ಗ್ರಾಮದ ಕೆದ್ದೇಲು ಎಂಬಲ್ಲಿ ನಡೆದಿದೆ.

ಕೆದ್ದೇಲು ನಿವಾಸಿ ಪ್ರಕಾಶ್ ಮೃತಪಟ್ಟ ದುರ್ದೈವಿ. ಕಳೆದ 20 ವರ್ಷಗಳಿಂದ ತಾಳೆ ಮರದಿಂದ ಶೇಂದಿ ತೆಗೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.

ಗುರುವಾರ ಬೆಳಗ್ಗೆ ಕೆಲವು ತಾಳೆ ಮರಗಳ ಮೂರ್ತೆದಾರ ಕೆಲಸ ಮುಗಿಸಿ ಬಾಕಿ ಉಳಿದ ಅತೀ ಎತ್ತರದ ಹಳೆಯ ತಾಳೆ ಮರದ ಶೇಂದಿ ತೆಗೆಯಲು ಮರ ಏರಿದ್ದರು.

ಈ ವೇಳೆ ಆಯತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡಿರುವ ಅವರನ್ನು ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅದಾಗಲೇ ಪ್ರಕಾಶ್ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇಂದು ಬಿಹಾರ ಬಂದ್: ನಾಲ್ವರ ಬಂಧನ

ಯುವತಿಯ ಅಪಹರಣ: ಲೈಂಗಿಕ ದೌರ್ಜನ್ಯವೆಸಗಿ ಬೀದಿಯಲ್ಲಿ ಮೆರವಣಿಗೆ

ಶಾಸಕ ಎಂ.ಪಿ. ಕುಮಾರಸ್ವಾಮಿಯಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ

ಡಾ.ಬಿ.ಆರ್‌.ಅಂಬೇಡ್ಕರ್‌ ಗೆ ಅವಮಾನ: ಸೂಕ್ತ ಕ್ರಮಕ್ಕೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ

ಝೊಮೆಟೋ ಡೆಲಿವರಿ ಬಾಯ್ ಹೊಟೇಲ್ ಸಿಬ್ಬಂದಿ ನಡುವೆ ಮಾರಾಮಾರಿ!

 

ಇತ್ತೀಚಿನ ಸುದ್ದಿ