ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾನಿಂದ ನಟಿ ಶೆರ್ಲಿನ್ ಚೋಪ್ರಾಗೆ ಲೈಂಗಿಕ ಕಿರುಕುಳ!
ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಕೇಸ್ ನಲ್ಲಿ ಬಂಧಿತನಾಗಿರುವ ರಾಜ್ ಕುಂದ್ರಾ ವಿರುದ್ಧ ಇದೀಗ ಲೈಂಗಿಕ ದೌರ್ಜನ್ಯದ ಕೇಸ್ ಕೂಡ ದಾಖಲಾಗಿದ್ದು, ನಟಿ ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
2019ರಲ್ಲಿ ಶೆರ್ಲಿನ್ ಚೋಪ್ರಾ ಜೊತೆಗೆ ಮಾತುಕತೆ ನಡೆಸಲು ರಾಜ್ ಕುಂದ್ರಾ ಕರೆದಿದ್ದು, ವ್ಯವಹಾರದ ಮಾತುಕತೆಯ ಬಳಿಕ ರಾಜ್ ಕುಂದ್ರಾ ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದ್ದ ಎಂದು ಶೆರ್ಲಿನ್ ಚೋಪ್ರಾ ಆರೋಪಿಸಿದ್ದು, ಆತನಿಂದ ತಪ್ಪಿಸಿಕೊಳ್ಳಲು ತಾನು ರೆಸ್ಟ್ ರೂಮ್ ನಲ್ಲಿ ಅಡಗಿಕೊಂಡಿರುವುದರಾಗಿ ಅವರು ಆರೋಪಿಸಿದ್ದಾರೆ.
ಇನ್ನೂ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಯ ನಡುವಿನ ಸಂಬಂಧ ಸರಿ ಇಲ್ಲ ಎಂದು ಶೆರ್ಲಿನ್ ಬಳಿಯಲ್ಲಿ ರಾಜ್ ಕುಂದ್ರಾ ಹೇಳಿದ್ದು, ಆಕೆಯ ಜೊತೆಗೆ ತನಗೆ ಸಂಬಂಧ ಸರಿ ಇಲ್ಲದ ಕಾರಣ ನಾನು ಯಾವಾಗಲೂ ಒತ್ತಡದಿಂದಲೇ ಇರುತ್ತೇನೆ ಎಂದು ರಾಜ್ ಕುಂದ್ರಾ ಹೇಳುತ್ತಿದ್ದನಂತೆ.
ಮಾಹಿತಿಗಳ ಪ್ರಕಾರ ಕಳೆದ ಏಪ್ರಿಲ್ ನಲ್ಲಿ ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ದೂರು ನೀಡಿದ್ದಳೆನ್ನಲಾಗಿದೆ. ಇಂದು ಈ ಪ್ರಕರಣದ ಹಿನ್ನೆಲೆಯಲ್ಲಿ ಅವರು ವಿಚಾರಣೆಗೆ ಹಾಜರಾಗಿದ್ದರು ಎಂದು ವರದಿಯಾಗಿದೆ.
ಇನ್ನಷ್ಟು ಸುದ್ದಿಗಳು…
ಬಾಲಕಿಗೆ “ಮನೆಯಲ್ಲಿ ಒಬ್ಬನೇ ಇದ್ದೇನೆ ಬರ್ತಿಯಾ” ಎಂದ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್
ಅಶ್ಲೀಲ ಚಿತ್ರ ವಿಚಾರ: ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ನಡುವೆ ಅವರ ಮನೆಯಲ್ಲಿಯೇ ಜಟಾಪಟಿ
ಸೆಕ್ಸ್ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗ | ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ
ಅಡುಗೆ ಮಾಡುವ ವಿಚಾರದಲ್ಲಿ ಪತಿಯೊಂದಿಗೆ ಜಗಳ: ನವವಿವಾಹಿತ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ