ಕಣ್ಣಿಗೆ ಕಾಣುವ ದೇವರಿದ್ದರೆ ಅದು ಶಿಕ್ಷಕರು: ಶಾಸಕ ಹರೀಶ್ ಪೂಂಜ - Mahanayaka
3:59 PM Thursday 12 - December 2024

ಕಣ್ಣಿಗೆ ಕಾಣುವ ದೇವರಿದ್ದರೆ ಅದು ಶಿಕ್ಷಕರು: ಶಾಸಕ ಹರೀಶ್ ಪೂಂಜ

harish poonja
06/09/2022

ಬೆಳ್ತಂಗಡಿ: ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಕಣ್ಣಿಗೆ ಕಾಣುವ ದೇವರಿದ್ದರೆ ಅದು ಶಿಕ್ಷಕರು ಎಂದು  ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ಶಿಕ್ಷಕರ ದಿನಾಚರಣೆ ಸಮಿತಿ, ತಾ.ಪಂ., ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪ.ಪಂ. ಬೆಳ್ತಂಗಡಿ ಸಂಯುಕ್ತ ಆಶ್ರಯದಲ್ಲಿ ಸೆ.5 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಸ್ವಾಮಿ ಕಲಾ ಭವನದಲ್ಲಿ ಹಮ್ಮಿಕೊಂಡ ಡಾ. ಸರ್ವಪಲ್ಲಿ ರಾಧಾ ಕೃಷ್ಣನ್‌ ರವರ ಜನ್ಮದಿನೋತ್ಸವ ಮತ್ತು ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅಪಾರ ಸೇವಾ ಮನೋಭಾವದೊಂದಿಗೆ ಅದ್ಭುತ ಸಮಾಜ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.

ಉಜಿರೆ ಶ್ರೀ ಧ.ವಸತಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಕೃಷ್ಣಮೂರ್ತಿ ಟಿ. ದಿಕ್ಸೂಚಿ ಭಾಷಣ ಮಾಡಿದರು.  ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಕ್ಷೇತ್ರವಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಕ್ಷೇತ್ರ ಸಮನ್ವಯಾಧಿಕಾರಿ ಶಂಭುಶಂಕರ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರುಗಳ ಸಂಘದ ಅಧ್ಯಕ್ಷ ವೆಂಕಟೇಶ ತುಳಮಳೆ, ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಅಧ್ಯಕ್ಷ ರಮೇಶ್ ಮಯ್ಯ, ಶಿ.ದಿ.ಸಮಿತಿ ನೋಡೆಲ್ ಹಾಗೂ ಕ್ಷೇತ್ರ ಸಮನ್ವಯಧಿಕಾರಿ ಸುಭಾಷ್ ಜಾದವ್, ಪ್ರೌ.ಶಾಲೆ ದೈ.ಶಿ.ಶಿ ಸಂಘ ಅಧ್ಯಕ್ಷ ಕೃಷ್ಣಾನಂದ ರಾವ್, ಪ್ರಾ.ಶಾಲೆ ದೈ.ಶಿ.ಶಿ. ಸಂಘ ಅಧ್ಯಕ್ಷ ಜಯರಾಜ್ ಜೈನ್, ಪ್ರಾ.ಶಾಲಾ ಶಿ. ಸಂಘದ ಅಧ್ಯಕ್ಷ ಕಿಶೋರ್ ಹಾಗೂ ಇತರರು ಇದ್ದರು.

ಅಗಲಿದ ದಿವ್ಯ ಚೇತನ ಡಾ.ಬಿ. ಯಶೋವರ್ಮದವರಿಗೆ ಹಾಗೂ ವೃತ್ತಿಯಲ್ಲಿರುವಾಗಲೇ ಅಗಲಿದ ಶಿಕ್ಷಕರುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಿ.ರಾಜಶೇಖರ ಅಜ್ರಿಯವರಿಂದ ಅವರ ಮಾತಾಪಿತರಾದ ದಿ.ಲಾಲಚಂದ್ರ ಹೆಗ್ಡೆ, ದಿ. ರಾಜಾವತಿಯಮ್ಮ ಹಾಗೂ ಪತ್ನಿ ದಿ.ಭಾರತಿಯವರ ಸಂಸ್ಕರಣೆಯಲ್ಲಿ ದತ್ತಿ ನಿಧಿ ಸಮರ್ಪಣೆ ನಡೆಯಿತು.

2021-22 ನೇ ಸಾಲಿನಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳನ್ನು ಗೌರವಿಸಲಾಯಿತು. ವಿಶೇಷ ಚೇತನರಾಗಿದ್ದು ಕಳೆದ ಎಸೆಸೆಲ್ಸಿಯಲ್ಲಿ ಮೊದಲ 3 ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ಎಸೆಸೆಲ್ಸಿಯಲ್ಲಿ 625 ಪೂರ್ಣಂಕ ಪಡೆದ 5 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತ ಶಿಕ್ಷರುಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತೆ ಶಿಕ್ಷಕರುಗಳಿಗೆ ಬಹುಮಾನ ವಿತರಿಸಲಾಯಿತು.

ಕುಸುಮಾಧರ್ ಬಿ. ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಪ್ರಾಸ್ತಾಪಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ತಾರಕೇಸರಿ ಅವರು ಸಂದೇಶ ವಾಚಿಸಿದರು. ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಕಳೆದ ವರ್ಷ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಟ್ಟದಬೈಲು ಸ.ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕ ಎಡ್ವರ್ಡ್ ಡಿಸೋಜ, ದ.ಕ.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬೊಳ್ಳುಕಲ್ಲು ಸ.ಹಿ.ಪ್ರಾ.ಶಾಲೆ ಸಹಶಿಕ್ಷಕ ಪಿ.ಶಿವಾನಂದ ಭಂಡಾರಿ, ಬಂಗಾಡಿ ಸ.ಹಿ.ಪ್ರಾ.ಶಾಲೆ ಸಹಶಿಕ್ಷಕ ಅಮಿತಾನಂದ ಹೆಗ್ಡೆ, ಗೇರುಕಟ್ಟೆ ಸ.ಪ್ರೌಢ ಶಾಲೆ ದೈ.ಶಿ.ಶಿಕ್ಷಕ ಅಜಿತ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಇದೇ ವೇಳೆ ನಿವೃತ್ತ 27 ಮಂದಿ ಶಿಕ್ಷಕರನ್ನು ಗೌರವಿಸಲಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ