ಶಿಕ್ಷಾ ಸಾರಥಿ ವಿದ್ಯಾರ್ಥಿವೇತನ : ಅರ್ಜಿ ಸಲ್ಲಿಸಿದವರಿಗೆ ಸಿಗಲಿದೆ 25 ಸಾವಿರ ರೂ.

Shiksha Sarathi Scholarship 2025 — ಜಿಕೆ ಟಯರ್ & ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ವಿವಿಧ ಕೋರ್ಸ್ ಅಧ್ಯಯನ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ 15 ಸಾವಿರ ರೂಪಾಯಿಯಿಂದ 25 ಸಾವಿರ ರೂಪಾಯಿಯವರೆಗೆ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಈ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತೆಗಳ ವಿವರ, ಅರ್ಜಿ ಸಲ್ಲಿಸಲು ಬೇಕಾಗಿರುವ ಅಧಿಕೃತ ಜಾಲತಾಣದ ಲಿಂಕ್, ಕೊನೆಯ ದಿನಾಂಕದ ವಿವರ ಸೇರಿದಂತೆ ವಿವಿಧ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಅರ್ಹ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಸದುಪಯೋಗ ಪಡೆಸಿಕೊಳ್ಳಿ.
JK Tyre Shiksha Sarthi Scholarship Program 2024-25 : ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಇದು ಒಂದು ಭಾರೀ ವಿದ್ಯಾರ್ಥಿವೇತನವಾಗಿದ್ದು, ವಿವಿಧ ವಿಷಯಗಳಲ್ಲಿ ತಾಂತ್ರಿಕ, ತಾಂತ್ರಿಕೇತರ ಪದವಿ ಹಾಗೂ ಡಿಪ್ಲೋಮ ಓದುತ್ತಿರುವ ಕೇವಲ ಭಾರೀ ವಾಹನ ಚಾಲಕರ ಪುತ್ರಿಯರಿಗೆ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 5 ಲಕ್ಷ ರೂ. ಒಳಗಿರಬೇಕು.
ಯಾರಿಗೆ ಎಷ್ಟು ರೂ. ಸ್ಕಾಲರ್ಷಿಪ್ ಸಿಗಲಿದೆ?
* ತಾಂತ್ರಿಕ ವಿಷಯಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ — 25,000ರೂ.
* ತಾಂತ್ರಿಕೇತರ ವಿಷಯಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ — 15,000ರೂ.
* ಡಿಪ್ಲೋಮ ಅಭ್ಯರ್ಥಿಗಳಿಗೆ — 15,000ರೂ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ — 15 ಫೆಬ್ರವರಿ 2025
ಅರ್ಜಿ ಸಲ್ಲಿಕೆ ಲಿಂಕ್ — https://search.app/ZBeWWUTJzpstK8Ge9
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: