ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು - Mahanayaka

ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

kashmir
01/06/2022

ಕುಲ್ಗಾಮ್‌ ನಲ್ಲಿ  ಉಗ್ರರು ಶಿಕ್ಷಕಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿಗೊಳಗಾದ ಕೂಡಲೇ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಶಿಕ್ಷಕಿ ರಜಿನಿ ಬಾಲಾ (36)  ಹತ್ಯೆಗೀಡಾದವರಾಗಿದ್ದಾರೆ. ಈ ಪ್ರದೇಶದಲ್ಲಿ ಭದ್ರತಾ ಪಡೆಗಳ ನೇತೃತ್ವದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಗೋಪಾಲಪುರದಲ್ಲಿರುವ ಪ್ರೌಢಶಾಲೆಗೆ ಪ್ರವೇಶಿಸಿದ ಭಯೋತ್ಪಾದಕರು ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಮೇ ತಿಂಗಳಲ್ಲಿ ಕಾಶ್ಮೀರದಲ್ಲಿ ಇದುವರೆಗೆ ಏಳು ಕೊಲೆಗಳು ನಡೆದಿವೆ.  ಇವರಲ್ಲಿ ನಾಲ್ವರು ನಾಗರಿಕರು ಹಾಗೂ ಮೂವರು ಪೊಲೀಸರು.

ಈ ಹಿಂದೆ ಕಾಶ್ಮೀರಿ ಕಿರುತೆರೆ ನಟಿ ಅಮ್ರಿನ್ ಭಟ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.  ಅಮ್ರಿನ್ ಅವರ 10 ವರ್ಷದ ಸೋದರಳಿಯ ಕೂಡ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಅಮ್ರಿನ್ ಹತ್ಯೆಯ ಕೆಲವು ದಿನಗಳ ಮೊದಲು, ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಸಹ ಭಯೋತ್ಪಾದಕರಿಂದ ಹತ್ಯೆಗೀಡಾಗಿದ್ದರು.  ಕಣಿವೆಯಲ್ಲಿ ಘರ್ಷಣೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳೀಯರು ಕಾಶ್ಮೀರ ಪೊಲೀಸರ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹನುಮ ಜನ್ಮ ಸ್ಥಳ ವಿವಾದ: ಧರ್ಮ ಸಂಸತ್ ನಲ್ಲಿ ಸ್ವಾಮೀಜಿಗಳ ಕಿರಿಕ್:  ಮೈಕ್ ನಿಂದ ಹೊಡೆಯಲು ಹೋದ ಸ್ವಾಮೀಜಿ!

ಸಂಗೀತ ಕಾರ್ಯಕ್ರಮದ ಬಳಿಕ ಹೃದಯಾಘಾತದಿಂದ ಮೃತಪಟ್ಟ ಖ್ಯಾತ ಗಾಯಕ

ಸರ್ಕಾರಕ್ಕೆ ಮತ್ತೆ ತಲೆನೋವು: ಕವಿತೆ, ಲಲಿತ ಪ್ರಬಂಧ ವಾಪಸ್‌ ಪಡೆದ ಇಬ್ಬರು ಲೇಖಕರು

ಪಠ್ಯಪುಸ್ತಕದ ವಿಚಾರದಲ್ಲಿ ಸತ್ಯದ ವಿಷಯ ಮರೆಮಾಚುವ ಕೆಲಸ ಆಗ್ತಿದೆ: ಸದಾನಂದ ಗೌಡ

ಇತ್ತೀಚಿನ ಸುದ್ದಿ