ಶೈಕ್ಷಣಿಕ ಸಾಲ ಮನ್ನಾ, ಶಿರವಸ್ತ್ರ ಹೆಸರಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ನಿರಾಕರಣೆ ಖಂಡಿಸಿ : ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ವಿಜಯಪುರ: ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಶಿರವಸ್ತ್ರ (ಹಿಜಾಬ್) ಹೆಸರಿನಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿರುವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲೆಯ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ನಗರದ ಅಂಬೇಡ್ಕರ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಷಯ ಕುಮಾರ್ ಅಜಮನಿ, ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಶಿರವಸ್ತ್ರ (ಹಿಜಾಬ್) ಧರಿಸಿದ್ದಕ್ಕಾಗಿ ಶಾಲಾ ಕಾಲೇಜುಗಳಿಗೆ ಪ್ರವೇಶ ವಿಲ್ಲವೆಂದು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸಕ್ಕೆ ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಹೇಳಿದರು.
ಮುಸ್ಲಿಂ ಹೆಣ್ಣುಮಕ್ಕಳ ಉಡುಗೆ ತೊಡುಗೆಗಳ ಕಾರಣ ಮುಂದಿಟ್ಟುಕೊಂಡು ಶಿಕ್ಷಣದ ಹಕ್ಕನ್ನು ನಿರಾಕರಿಸಲಾಗುತ್ತಿರುವದು ಪ್ರಜ್ಞಾವಂತ ನಾಗರಿಕರು ಖಂಡಿಸಬೇಕು. ಸಮವಸ್ತ್ರದ ಮೂಲಕ ಸಮಾನತೆ ಹೇಳಲು ಹೊರಟಿರುವವರಿಗೆ ಜಾತಿ ಹೆಸರಲ್ಲಿ ನಿತ್ಯ ನಡೆಯುವ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ, ಅಸ್ಪೃಶ್ಯತೆ, ಅಸಮಾನತೆಯನ್ನು ಕೊನೆಗಾಣಿಸಲು ಈ ಕ್ಷಣಕ್ಕೂ ಸಾಧ್ಯವಾಗಿಲ್ಲ ಎಂಬದು ತಮ್ಮಗೂ ತಿಳಿದಿರುವ ಸಂಗತಿ ಆಗಿದೆ ಎಂದರು.
ಶಿರವಸ್ತ್ರ (ಹಿಜಾಬ್) ಎಂದರೆ ಅಂದರೆ ಹೆಚ್ಚಿನವರು ಬುರ್ಖಾ ಎಂದು ತಪ್ಪು ತಿಳಿದು ಕೊಂಡಿದ್ದಾರೆ. ಹಿಜಾಬ್ (ಶಿರವಸ್ತ್ರ) ಎಂದರೆ ಕೂದಲು ಕಾಣದ ಹಾಗೆ ತಲೆಯ ಮೇಲೆ ಹಾಕುವ ವಸ್ತ್ರ (ದುಪ್ಪಟ್ಟ) ಅದನ್ನು ಶಾಲಾ ಕಾಲೇಜುಗಳ ಸಮವಸ್ತ್ರದಲ್ಲಿರುವ ಶಾಲನ್ನೇ ಹಿಜಾಬ್ ಆಗಿ ಉಪಯೋಗಿಸುತ್ತಾರೆ. ಕೋಮುವಾದಿ ಮತ್ತು ಮಹಿಳಾ ವಿರೋಧಿ ಮನಸ್ಥಿತಿ ಇರುವವರಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದೆ ಬರುವುದನ್ನು ತಡೆಯಲು, ಅನಗತ್ಯವಾಗಿ ಶಾಲಾ ಕಾಲೇಜುಗಳಲ್ಲಿ ಷಡ್ಯಂತ್ರ ರೂಪಿಸುವತ್ತಿರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದನ್ನು ಹಲವು ಪ್ರಜ್ಞಾವಂತರು ಖಂಡಿಸುತ್ತಿದ್ದಾರೆ ಮತ್ತು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯದಿಂದ ನಮ್ಮ ನಾಡಿಗೆ ಕೆಟ್ಟ ಹೆಸರು ಬರುತ್ತಿದೆ. ಹಲವು ವರ್ಷಗಳಿಂದ ಅಲ್ಪಸಂಖ್ಯಾತ ವಿಧ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಾಲಾ ಕಾಲೇಜುಗಳಿಗೆ ಬರುತ್ತಿದ್ದಾರೆ ಮತ್ತು ಬಂದಿದ್ದಾರೆ. ಎಂದು ಆಗದ ಈ ವಿರೋಧ ಈಗ ಏಕೆ? ಎಂದು ಎಂದು ಅಕ್ಷಯಕುಮಾರ ಅಜಮನಿ ಪ್ರಶ್ನಿಸಿದ್ದಾರೆ.
ಇಂತಹ ಕೃತ್ಯಗಳಿಂದ ನಾಡಿನ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಪ್ರಯತ್ನಸಿತ್ತಿರು ಕೋಮುವಾದಿ ವ್ಯಕ್ತಿಗಳು ಯಾರೇ ಇರಲಿ ಅವರ ವಿರುದ್ಧ ಮುಖ್ಯಮಂತ್ರಿಗಳು ಕಾನಾನಾತ್ಮಕ ಕ್ರಮ ತೆಗೆದುಕೊಂಡು, ಅಲ್ಪಸಂಖ್ಯಾತ ಮುಸ್ಲಿಂ ವಿಧ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣ ಮುಂದುವರಿಸಲು ಅನುವು ಮಾಡಿಕೊಡಬೇಕೆಂದು ಹೋರಾಟದ ಮೂಲಕ ಆಗ್ರಹಿಸುತ್ತೇವೆ ಮತ್ತು ಕೋವಿಡ್ ನಿಂದ ಎರಡು ವರ್ಷಗಳ ಲಾಕ್‌ಡೌನ್ ದಿಂದಾಗಿ ದೇಶದಲ್ಲೆದೆ ದೇಶದ ನಾಗರಿಕರ ಆರ್ಥಿಕ ಪರಿಸ್ಥಿತಿಯೂ ತೀವ್ರವಾಗಿ ಹದಗೆಟ್ಟ ಹೋಗಿದೆ. ತಮ್ಮ ಮಕ್ಕಳ ಉತ್ತಮ ಶೈಕ್ಷಣಿಕ ಭವಿಷ್ಯಕ್ಕಾಗಿ ಹಲವು ಪಾಲಕರು ಮತ್ತು ವಿಧ್ಯಾರ್ಥಿಗಳು ವಿವಿಧ ಬ್ಯಾಂಕ್ ಗಳ ಮೂಲಕ ಶೈಕ್ಷಣಿಕ ಸಾಲವನ್ನು ಪಡೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದ ಎಲ್ಲ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ, ಇಂತಹ ಸಂದರ್ಭದಲ್ಲಿ ಬ್ಯಾಂಕ್ ಗಳಿಂದ ಪಡೆದ ಶೈಕ್ಷಣಿಕ ಸಾಲವನ್ನು ಕಟ್ಟಲು ಆಗದೆ ಹಲವು ಪಾಲಕರು ಮತ್ತು ವಿಧ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧ್ಯಾರ್ಥಿಗಳ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡುವ ಮೂಲಕ ಸಂಕಷ್ಟದಲ್ಲಿರುವ ಪಾಲಕರ, ವಿಧ್ಯಾರ್ಥಿಗಳ ನೆರವಿಗೆ ಸರ್ಕಾರ ನಿಲ್ಲಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು ಅಕ್ಷಯಕುಮಾರ ಹೇಳಿದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ನ ನಗರ ಘಟಕದ ಸಂಚಾಲಕ ಆನಂದ ಮುದುರ, ಮುಖಂಡರಾದ ಸೈಯದ ತಾಲಿಬ, ಯಮನೂರಿ ಸಿಂದಗೇರಿ, ದರ್ಶನ, ರುತಿಕೇಶ್, ಶಿವರಾಮ್, ಅಬೂಬಕ್ಕರ, ಮುಜಮಿಲ್ಲ, ಅಶ್ರಫ್, ಗೌಶ್ ಪಟೇಲ್, ಲೋಕೇಶ್, ಅನ್ನನ, ಉಮೇಶ್, ಅಜಿಜ್ ಆಶಿಫ್ ಅಲ್ಲದೇ ವಿವಿಧ ಸಂಘನೆಯ ಮುಖಂಡರು ಪ್ರತಿಭಟನೆ ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಿಜಾಬ್-ಕೇಸರಿ ಪೈಟ್ ನಡುವೆ ಎಂಟ್ರಿಯಾದ ನೀಲಿ: ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು
ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು
ಕಲಾವಿದೆಯರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸಿದ ಆರ್ಕೇಸ್ಟ್ರಾ ಮಾಲಕ: ದೂರು ದಾಖಲು
ಬ್ರಾಹ್ಮಣ ಅನ್ನೋದು ಜಾತಿಯಲ್ಲ, ಅದು ಉನ್ನತ ಜೀವನ ವಿಧಾನ: ಬಿಜೆಪಿ ಹಿರಿಯ ನಾಯಕ ದಿನೇಶ್ ಶರ್ಮಾ