ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟಿ ಶಿಲ್ಪಾಶೆಟ್ಟಿ!
ಮುಂಬೈ: ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಮಾನಹಾನಿಕರ ವಿಚಾರಗಳನ್ನು ಪ್ರಕಟಿಸದಂತೆ ತಡೆ ಕೋರಿ ವಿವಿಧ ಮಾಧ್ಯಮ, ಸಂಸ್ಥೆಗಳು, ಸುದ್ದಿವಾಹಿನಿಗಳ ವಿರುದ್ಧ ನಟಿ ಶಿಲ್ಪಾಶೆಟ್ಟಿ ಕುಂದ್ರಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ ವರು ಪರಣಾಮ್ ಲಾ ಅಸೋಸಿಯೇಟ್ಸ್ ಮೂಲಕ ಸಲ್ಲಿಸಿರುವ ಮೊಕದ್ದಮೆಯಲ್ಲಿ, ಮಾಧ್ಯಮಗಳು ಸುದ್ದಿಗಳನ್ನು ಸಂವೇದನಾಶೀಲಗೊಳಿಸುವ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಆಕ್ಷೇಪಾರ್ಹ ಲೇಖನಗಳನ್ನು ಅಪ್ ಲೋಡ್ ಮಾಡಿದೆ. ಮತ್ತು ಆಕೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಕಟಿಸಿದೆ ಎಂದು ಆರೋಪಿಸಿದ್ದಾರೆ.
ಮಾನಹಾನಿ ವಿಷಯವನ್ನು ತೆಗೆದುಹಾಕಬೇಕು ಮತ್ತು ಆಪಾದಿತ ಲೇಖನಗಳು ಮತ್ತು ವಿಡಿಯೋಗಳು ಆಧಾರರಹಿತ ಮತ್ತು ಅನಗತ್ಯ ಎಂದು ಕ್ಷಮೆಯಾಚಿಸಬೇಕೆಂದು ಶಿಲ್ಪಾ ಮನವಿ ಮಾಡಿದ್ದಾರೆ. ಶಿಲ್ಪಾಶೆಟ್ಟಿ ಕ್ಲಾಪಿಂಗ್ ಹ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಫ್ರೀ ಪ್ರೆಸ್ ಜರ್ನಲ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಗೂಗಲ್ ಮೊದಲಾದ ಸಂಸ್ಥೆಗಳ ವಿರುದ್ಧ ಶಿಲ್ಪಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾನಿಂದ ನಟಿ ಶೆರ್ಲಿನ್ ಚೋಪ್ರಾಗೆ ಲೈಂಗಿಕ ಕಿರುಕುಳ!
ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್
ಬಾಲಕಿಗೆ “ಮನೆಯಲ್ಲಿ ಒಬ್ಬನೇ ಇದ್ದೇನೆ ಬರ್ತಿಯಾ” ಎಂದ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್
ಸೆಕ್ಸ್ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗ | ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ
ಯಡಿಯೂರಪ್ಪಗೆ ವಯಸ್ಸಾಗಿಲ್ಲ, ಮದುವೆ ಮಾಡಿಸಿದ್ರೆ ಮಕ್ಕಳಾಗ್ತವೆ | ಸಿ.ಎಂ.ಇಬ್ರಾಹಿಂ