ಅಶ್ಲೀಲ ಚಿತ್ರ ವಿಚಾರ: ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ನಡುವೆ ಅವರ ಮನೆಯಲ್ಲಿಯೇ ಜಟಾಪಟಿ
ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಬಂಧನವಾಗಿದ್ದು, ಜುಲೈ 23ರಂದು ರಾಜ್ ಕುಂದ್ರಾನನ್ನು ಅವರ ನಿವಾಸಕ್ಕೆ ಕರೆದುಕೊಂಡು ಬಂದ ವೇಳೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ನಡುವೆ ತೀವ್ರ ವಾಗ್ಯದ್ಧವೇ ನಡೆದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪೊಲೀಸರು ರಾಜ್ ಕುಂದ್ರಾನನ್ನು ಮನೆಗೆ ಕರೆ ತರುತ್ತಿದ್ದಂತೆಯೇ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ವಿರುದ್ಧ ಗರಂ ಆಗಿದ್ದಾರೆ. ನಿನ್ನಿಂದಾಗಿ ನಮ್ಮ ಕುಟುಂಬದ ಘನೆತೆಯೇ ಹೋಯಿತು ಎಂದು ಕಿಡಿಕಾಡಿದ್ದಾರೆ ಎಂದು ಇವರಿಬ್ಬರು ನಡುವೆ ತೀವ್ರ ವಾಗ್ಯದ್ಧ ನಡೆದಿದೆ ಎಂದು ಹೇಳಲಾಗಿದ್ದು, ಈ ವಿಚಾರವನ್ನು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿವೆ ಎನ್ನಲಾಗಿದೆ.
ರಾಜ್ ಕುಂದ್ರಾನನ್ನು ನೋಡುತ್ತಿದ್ದಂತೆಯೇ ಆಕ್ರೋಶ ಹೊರ ಹಾಕಿದ ಶಿಲ್ಪಾ ಶೆಟ್ಟಿ, ನಿಮ್ಮ ಮೇಲಿನ ಆರೋಪವು ನಮ್ಮ ಕುಟುಂಬದ ಮೇಲಿನ ಗೌರವವನ್ನು ಕಡಿಮೆ ಮಾಡಿದೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಕಡಿಮೆ ಮಾಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಇಂಡಿಯಾ ಟು ಡೇ ವರದಿ ಮಾಡಿದೆ.
ಇನ್ನಷ್ಟು ಸುದ್ದಿಗಳು…
ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೇಲೆ ಕಾರಿನಲ್ಲೇ ಅತ್ಯಾಚಾರ | ಬಾಡಿಗೆ ಮನೆ ಮಾಲಿಕನಿಂದ ಕೃತ್ಯ
ಅರ್ಚಕ ನೀಡಿದ ಪ್ರಸಾದ ಸೇವಿಸಿದ ಭಕ್ತರಿಗೆ ವಾಂತಿ ಭೇದಿ | 20ಕ್ಕೂ ಅಧಿಕ ಅಸ್ವಸ್ಥ
ಪ್ರವಾಹದ ಬೆನ್ನಲ್ಲೇ ಮನೆಯ ತಾರಸಿ, ರಸ್ತೆಯಲ್ಲಿ ಪತ್ತೆಯಾಗ್ತಿವೆ ಮೊಸಳೆಗಳು!
ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್
ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ