ಇನ್ನು ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳಲು 4 ಗಂಟೆಗಳು ಸಾಕು: ಶಿರಾಡಿ ಘಾಟ್ ಎಕ್ಸ್ ಪ್ರೆಸ್ ವೇ ಬಹುತೇಕ ಖಚಿತ
ಕೊಟ್ಟಿಗೆಹಾರ: ಬೆಂಗಳೂರಿನಿಂದ ಮಂಗಳೂರಿಗೆ ಸಾಗಲು ಎಕ್ಸ್ ಪ್ರೆಸ್ ವೇಗೆ ಯೋಜನೆ ನಡೆದಿದ್ದು, ಶಿರಾಡಿ ಘಾಟ್ ಮೂಲಕ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ ಬಹುತೇಕ ಖಚಿತವಾಗಿದೆ.
ಮಂಗಳೂರಿಗೆ ಸಾಗಲು ಶಿರಾಡಿ ಮಾತ್ರವಲ್ಲದೇ, ಚಾರ್ಮಾಡಿ ಘಾಟ್ ಕೂಡ ರಸ್ತೆ ಇದೆ.ಆದರೆ ಬಂದರು ನಗರಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಶಿರಾಡಿ ಘಾಟ್ ನಲ್ಲಿ ಎಕ್ಸ್ ಪ್ರೆಸ್ ವೇ ನಡೆಸಲು 8 ಕಂಪನಿಗಳು ಭಾಗವಹಿಸಿವೆ.
ಈಗಾಗಲೇ ಬೆಂಗಳೂರುನಿಂದ ಮಂಗಳೂರಿಗೆ ಸಾಗಲು ಆರೇಳು ಗಂಟೆಗಳು ತಗಲುವುದರಿಂದ ಎಕ್ಸ್ ಪ್ರೆಸ್ ವೇಯಲ್ಲಿ ನಾಲ್ಕು ಗಂಟೆ ಮಾತ್ರ ಸಾಕಾಗುತ್ತದೆ ಎಂದು ಬೆಂಗಳೂರು ಟ್ರಾಫಿಕ್ ಎಕ್ಸ್ ಪೊರ್ಟ್ ಚಂದ್ರಶೇಖರ್ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ರಸ್ತೆ ನಿರ್ಮಾಣ ಮಾಡಲು ಪರಿಸರವಾದಿಗಳ ಅಡೆತಡೆಯನ್ನು ಎದುರಿಸಬೇಕಾದ ಅನಿವಾರ್ಯತೆಯೂ ಎದುರಾಗಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: