ಶಿವರಾತ್ರಿಯಂದೇ ನೇಣಿಗೆ ಶರಣಾದ ತಾಯಿ, ಮಗ | ಕಾರಣ ಏನು ಗೊತ್ತಾ? - Mahanayaka
5:15 AM Wednesday 11 - December 2024

ಶಿವರಾತ್ರಿಯಂದೇ ನೇಣಿಗೆ ಶರಣಾದ ತಾಯಿ, ಮಗ | ಕಾರಣ ಏನು ಗೊತ್ತಾ?

11/03/2021

ಕಲಬುರಗಿ:  ಶಿವರಾತ್ರಿ ದಿನದಂದೇ ತಾಯಿ ಮತ್ತು ಮಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಓಂ ನಗರ ಅಪಾರ್ಟ್ ಮೆಂಟ್ ನಲ್ಲಿ ನಡೆದಿದ್ದು,  33 ವರ್ಷ ವಯಸ್ಸಿನ ಸುಚಿತ್ರಾ ಹಾಗೂ ಅವರ 9 ವರ್ಷ ವಯಸ್ಸಿನ ಪುತ್ರ ವಿನೀತ್ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.

ಸುಚಿತ್ರಾ ಅವರು 11 ವರ್ಷಗಳ ಹಿಂದೆ ಬಾಗಲಕೋಟೆಯ ಮುಧೋಳ ಮೂಲದ ಜಗದೀಶ್ ಕಾಂಬಳೆ ಎಂಬವ ಜೊತೆಗೆ ವಿವಾಹವಾಗಿದ್ದು, ಓಂ ನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು.  ಜಗದೀಶ್ ಕಲಬುರಗಿಯ ಕಾಳಗಿ ತಾಲೂಕಿನ ಎಸ್ ಬಿಐ ಬ್ಯಾಂಕ್ ನ ಡೆಪ್ಯೂಟಿ ಮ್ಯಾನೇಜರ್ ಆಗಿದ್ದಾರೆ.

ತಾಯಿ ಮಗನ ಆತ್ಮಹತ್ಯೆಗೆ ಕಾರಣ ಏನು ಎಂದು ಇನ್ನೂ ತಿಳಿದು ಬಂದಿಲ್ಲ.  ಸದ್ಯ ಇದು ಆತ್ಮಹತ್ಯೆಯೇ ? ಅಥವಾ ಕೊಲೆಯೇ ಎಂಬ ಅನುಮಾನಗಳು ಕೇಳಿ ಬಂದಿವೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯಿಂದ ಸತ್ಯ ಹೊರಬರಬೇಕಿದೆ.

ಇತ್ತೀಚಿನ ಸುದ್ದಿ