ಕೊಟ್ಟಿಗೆಹಾರದಲ್ಲಿ ಶಿವಾಜಿ ಹುಟ್ಟುಹಬ್ಬದ ಸಂಭ್ರಮ - Mahanayaka
9:53 PM Thursday 20 - February 2025

ಕೊಟ್ಟಿಗೆಹಾರದಲ್ಲಿ ಶಿವಾಜಿ ಹುಟ್ಟುಹಬ್ಬದ ಸಂಭ್ರಮ

kottigehara shivaji
19/02/2025

ಕೊಟ್ಟಿಗೆಹಾರ: ಸಮೀಪದ ದೇವನಗುಲ್ ಗ್ರಾಮದ ಸಂಜಯ್ ಹಾಗೂ ಸಂದೀಪ್ ಅವರ ಮನೆಯಲ್ಲಿ ಮಹಾನ್ ವೀರನಾಗಿ ಖ್ಯಾತಿ ಪಡೆದ ಛತ್ರಪತಿ ಶಿವಾಜಿ ಮಹಾರಾಜರ ಹುಟ್ಟುಹಬ್ಬವನ್ನು ಸರಳವಾಗಿ ಹೃದಯಪೂರ್ವಕವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಬಿನ್ನಾಡಿ ಮಾತನಾಡಿ, “ಛತ್ರಪತಿ ಶಿವಾಜಿ ಮಹಾರಾಜರು ಅಪರೂಪದ ದೇಶಭಕ್ತ. ಇಂತಹ ಮಹಾನ್ ರಾಜನ ಹುಟ್ಟುಹಬ್ಬವನ್ನು ಆಚರಿಸುವ ಅವಕಾಶ ನಮಗೆ ಸಿಕ್ಕಿದ್ದು ಹೆಮ್ಮೆಯ ವಿಚಾರ,” ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಮುಖಂಡ ಸಂಜಯ್ ಗೌಡ ಕೊಟ್ಟಿಗೆಹಾರ ಅವರು ಮಾತನಾಡಿ, “ಶಿವಾಜಿಯ ಜೀವನ ಚರಿತ್ರೆ ನಮ್ಮೆಲ್ಲರಿಗೂ ಮಾದರಿಯಾಗಬೇಕು. ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಅವರ ಅಮೋಘ ದೇಶಪ್ರೇಮ, ಶೌರ್ಯ, ಹಾಗೂ ಆಡಳಿತ ತಂತ್ರದ ಮಹತ್ವ ತಿಳಿಯುತ್ತದೆ. ಇಂದು ಅವರ ಜನ್ಮದಿನವನ್ನು ನಮ್ಮ ಮನೆಯಲ್ಲಿ ಆಚರಿಸುವ ಸೌಭಾಗ್ಯ ಒದಗಿ ಬಂದಿದೆ ಎಂದರು”

ಈ ಕಾರ್ಯಕ್ರಮದಲ್ಲಿ ಸಂದೀಪ್, ಪ್ರಕಾಶ್, ಸುಂದರೇಶ್ ಗೌಡ, ಯಶೋದಮ್ಮ, ಅನುಷಾ, ನರೇಂದ್ರ ಗೌಡ, ಚಂದನ, ಲೀಲಾ, ನಾರಾಯಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ