ರಮೇಶ್ ಜಾರಕಿಹೊಳೆ ಸಿಡಿ ಪ್ರಕರಣ: ಶಿವಕುಮಾರ್ ಮನೆಗೆ ಅಧಿಕಾರಿಗಳಿಂದ ದಾಳಿ!
20/03/2021
ಬೆಂಗಳೂರು: ರಮೇಶ್ ಜಾರಕಿಹೊಳೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ತನಿಖೆ ಚುರುಕು ಮಾಡಿದ್ದು, ಇದೀಗ ಉದ್ಯಮಿ ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ.
ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಗಳಿಗೆ ಶಿವಕುಮಾರ್ ಹಣ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೆಪಿನಗರದ ಕೊತ್ತನೂರು ದಿಣ್ಣೆಯಲ್ಲಿರುವ ಶಿವಕುಮಾರ್ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರಕರಣದ ಆರೋಪಿ ನರೇಶ್ ಜೊತೆಗೆ ಮೂರು ತಿಂಗಳಿನಿಂದ ಶಿವಕುಮಾರ್ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಅಲ್ಲದೆ ಯುವತಿಗೆ ಹಣ ನೀಡಿರುವ ಸುಳಿವು ಪತ್ತೆಯಾಗಿದೆ. ಮಾರ್ಚ್ 10 ರಂದು ಎರ್ನಾಕುಲಂನಲ್ಲಿ ಮೊಬೈಲ್ ಸ್ವಿಚ್‌ಆಫ್ ಆಗಿದ್ದು ಕಳೆದ 10 ದಿನಗಳಿಂದ ಶಿವಕುಮಾರ್ ತಲೆಮರೆಸಿಕೊಂಡಿದ್ದಾರೆ.
ತಲೆಮರೆಸಿಕೊಂಡ ಬೆನ್ನಲ್ಲೇ ಹೊಸ ಮೊಬೈಲ್ ನಂಬರ್ ನಿಂದ ಪತ್ನಿಗೆ ಕರೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಈ ಸಂಬಂಧ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.