ಶಿವಮೊಗ್ಗದ ಬಳಿಕ ತುಮಕೂರಿನಲ್ಲೂ ಭೀಕರ ಸ್ಫೋಟ | ಮನೆಯಲ್ಲಿದ್ದ ಮಹಿಳೆಗೆ ಆಗಿದ್ದೇನು?

02/02/2021

ತುಮಕೂರು: ಮನೆಯೊಂದರಲ್ಲಿ ದಾಸ್ತಾನು ಮಾಡಿದ್ದ, ಜಿಲೆಟಿನ್, ಗನ್ ಪೌಡರ್ ಸ್ಫೋಟಗೊಂಡ ಘಟನೆ ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಮನೆಯಲ್ಲಿದ್ದ ಮಹಿಳೆ ಸುವರ್ಣಮ್ಮ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀಕಾಂತ್ ಅವರ ಮನೆಯಲ್ಲಿ  ದಾಸ್ತಾನು ಇರಿಸಲಾಗಿದ್ದ, ಸ್ಫೋಟಕಗಳು ಆಕಸ್ಮಿಕವಾಗಿ ಸ್ಫೋಟಗೊಂಡಿದೆ.

ಘಟನೆಯಲ್ಲಿ ಗಾಯಗೊಂಡ ಸಣ್ಣಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಸ್ಫೋಟದ ಬಳಿಕ ಮನೆಯನ್ನು ಶೋಧ ನಡೆಸಲಾಗಿದ್ದು, ಈ ವೇಳೆ ನಾಡ ಬಂದೂಕು ಕೂಡ ಮನೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

 

ಇತ್ತೀಚಿನ ಸುದ್ದಿ

Exit mobile version