ಶಿವನ ವೇಷ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ: ಯುವಕನನ್ನು ಬಂಧನ - Mahanayaka
11:01 AM Wednesday 12 - March 2025

ಶಿವನ ವೇಷ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ: ಯುವಕನನ್ನು ಬಂಧನ

petrol price
11/07/2022

ಅಸ್ಸಾಂ: ಅಸ್ಸಾಂನಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ಯುವಕನೊಬ್ಬನನ್ನು  ಪೊಲೀಸರು ಬಂಧಿಸಿದ್ದಾರೆ.

ಬಿರಿಂಚಿ ಬೋರಾ ಎಂಬ ಯುವಕ ಶಿವನ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದಾನೆ.  ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ಪಾರ್ವತಿ ಪಾತ್ರದಲ್ಲಿ ನಟಿಸಿದ್ದ ಸಹನಟಿ  ಶಿಮಿತಾ ಅವರೊಂದಿಗೆ ಬೈಕ್  ನಲ್ಲಿ ಆಗಮಿಸಿದ್ದರು. ಬಿರಿಂಜಿ ಬೈಕ್ ನಿಲ್ಲಿಸಿ ಪೆಟ್ರೋಲ್ ಖಾಲಿಯಾದಂತೆ ನಟಿಸಿ ಮೋದಿ ಸರ್ಕಾರದಲ್ಲಿ ಇಂಧನ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ಆರಂಭಿಸಿದರು.


Provided by

ಬಿರಿಂಜಿ ನಂತರ  ಶಿವ ಮತ್ತು ಪಾರ್ವತಿಯ ನಡುವೆ ಜಗಳ ನಡೆದ  ರೀತಿಯಲ್ಲಿ  ಕೇಂದ್ರ ಸರ್ಕಾರ ಮತ್ತು ಬೆಲೆ ಏರಿಕೆಯ ವಿರುದ್ಧ ಧ್ವನಿ ಎತ್ತಿದ್ದರು. ಬೆಲೆ ಏರಿಕೆಯ ವಿರುದ್ಧ ಜನರು ಪ್ರತಿಕ್ರಿಯಿಸುವಂತೆ ಕರೆ ನೀಡಿದರು. ಇವರ ಪ್ರತಿಭಟನೆಯ ವಿಡಿಯೋ ಕೂಡ ಸಾಮಾಜಿಕ ವೈರಲ್ ಆಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ