ಶಿವರಾಜ್ ಕುಮಾರ್ ಪಾದಯಾತ್ರೆಗೆ ಹೋಗದಿರುವುದು ನನಗೆ ತುಂಬಾ ಸಂತೋಷವಾಗಿದೆ | ಸಚಿವ ಈಶ್ವರಪ್ಪ
ಶಿವಮೊಗ್ಗ: ನಟ ಶಿವರಾಜ್ ಕುಮಾರ್ ಮೇಕೆದಾಟು ಹೋರಾಟದಲ್ಲಿ ಭಾಗಿಯಾಗದೇ ಇರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನಗೆ ಬಹಳ ಸಂತೋಷ ಎಂದರೆ ಅಲ್ಲಿಗೆ ಶಿವರಾಜ್ ಕುಮಾರ್ ಹೋಗದೇ ಇರುವುದು. ಮೇಕೆದಾಟು ಹೆಸರಿನಲ್ಲಿ ಮಾಡ್ತಿರುವ ರಾಜಕಾರಣದಲ್ಲಿ ಜನಜಾತ್ರೆಯಾಗುತ್ತಿದೆ. ಜಿ.ಪಂ, ತಾ.ಪಂ, ಅಸೆಂಬ್ಲಿ ಚುನಾವಣೆ ಟಿಕೆಟ್ಗಾಗಿ ಡಿ.ಕೆ. ಶಿವಕುಮಾರ್ ಮುಂದೆ ಶೋ ತೋರಿಸಲು ಹೋಗಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ನಾನು ಚಾಂಪಿಯನ್ ಆಗ್ಬೇಕು, ಸಿಎಂ ಆಗ್ಬೇಕು ಎಂಬ ಲೆಕ್ಕದಲ್ಲಿ ಇದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೂ ಕೋವಿಡ್ ಹಚ್ಚೋ ಅಧಿಕಾರವನ್ನು ಸೋನಿಯಾ ಗಾಂಧಿ ಕೊಟ್ರಾ? ಎಂದು ಪ್ರಶ್ನಿಸಿದ ಈಶ್ವರಪ್ಪ, ನೀವು ಸಿಎಂ ಆಗುವ ಭ್ರಮೆಯಲ್ಲಿ ರಾಜ್ಯದ ಜನರಿಗೆ ಕೋವಿಡ್ ಹರಡುವ ಪ್ರಯತ್ನ ಒಳ್ಳೆಯದು ಮಾಡಲ್ಲ ಎಂದು ತರಾಟೆಗೆತ್ತಿಕೊಂಡರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗಾಯಕಿ ಲತಾ ಮಂಗೇಶ್ಕರ್ ಅನಾರೋಗ್ಯ: ಐಸಿಯುನಲ್ಲಿ ಚಿಕಿತ್ಸೆ
ಮನುಷ್ಯನಿಗೆ ಹಂದಿಯ ಹೃದಯ ಅಳವಡಿಕೆ ಯಶಸ್ವಿ: ವಿಜ್ಞಾನದಲ್ಲಿ ಮತ್ತೊಂದು ಸಾಧನೆ
ಟೆಲಿಗ್ರಾಮ್ ಗ್ರೂಪ್ ಮೂಲಕ ಹಣ, ಲೈಂಗಿಕತೆಗಾಗಿ ಪತ್ನಿಯರ ವಿನಿಮಯ | ವಿಲಕ್ಷಣ ಘಟನೆ